ಸಂಸತ್ 
ದೇಶ

ಚೆಕ್‍ಬೌನ್ಸ್ ಮಸೂದೆಗೆ ಲೋಕಸಭೆ ಅಂಗೀಕಾರ

ಚೆಕ್‍ಬೌನ್ಸ್ ಪ್ರಕರಣಗಳ ಕುರಿತ ವಿಚಾರಣೆಯನ್ನು ಎಲ್ಲಿ ನಡೆಸಬೇಕೆಂದು ಇದ್ದ ಗೊಂದಲ ನಿವಾರಣೆಯಾಗಲಿದೆ

ನವದೆಹಲಿ: ಚೆಕ್‍ಬೌನ್ಸ್ ಪ್ರಕರಣಗಳ ಕುರಿತ ವಿಚಾರಣೆಯನ್ನು ಎಲ್ಲಿ ನಡೆಸಬೇಕೆಂದು ಇದ್ದ ಗೊಂದಲ ನಿವಾರಣೆಯಾಗಲಿದೆ. ಕೇಂದ್ರ ಸರ್ಕಾರ ಈ ಕುರಿತ ಸಂಧಾನ ಸಂರಚನಾ(ತಿದ್ದುಪಡಿ) 2015 ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿ ಧ್ವನಿಮತದಮೂಲಕ ಅಂಗೀಕಾರ ಸಿಕ್ಕಿತು.ಚೆಕ್‍ಬೌನ್ಸ್ ಪ್ರಕರಣಗಳಲ್ಲಿ ಚೆಕ್‍ನ್ನು ನೀಡಿದ ಸ್ಥಳ ಅಥವಾ ಕ್ಲಿಯರೆನ್ಸ್ ಸ್ಥಳದಲ್ಲಿ ವಿಚಾರಣೆ ನಡೆಸಬೇಕೆ ಎಂಬುದರ ಕುರಿತು ಗೊಂದಲಗಳು ಸೃಷ್ಟಿಯಾಗಿ ವಿವಾದಕ್ಕೂ ಕಾರಣವಾಗಿತ್ತು. ದೇಶದಲ್ಲಿ ಚೆಕ್‍ಬೌನ್ಸ್‍ಗೆ ಸಂಬಂಧಿಸಿದ ಸುಮಾರು 18 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ಪೆಂಡಿಂಗ್ ಇವೆ. ಮಸೂದೆ ಲೋಕಸಭೆ ಅಂಗೀಕಾರ ಪಡೆದಿದ್ದು ಅಧಿಸೂಚನೆ ಹೊರಡಿಸಿದ ನಂತರ ಕಾನೂನು ಜಾರಿಗೆ ಬರಲಿದೆ. ಇದರಿಂದ ಬಹಳಷ್ಟು ವರ್ಷಗಳಿಂದ ಇರುವ ಪ್ರಕರಣಗಳು ಇತ್ಯರ್ಥ ಕಾಣಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ