ದೇಶ

ಮೋದಿ ಸರ್ಕಾರ ಹೊಳಪು ಕಳೆದುಕೊಳ್ಳುತ್ತಿದೆ: ರಾಹುಲ್ ಬಜಾಜ್

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದ ಖ್ಯಾತ ಉದ್ಯಮಿ ರಾಹುಲ್ ಬಜಾಜ್ ಅಚ್ಚರಿಯ ಬೆಳವಣಿಗೆಯಾಲ್ಲಿ ಬಿಜೆಪಿ ಸರ್ಕಾರದ ಮೇಲೆ ಭಾರೀ ಟೀಕಾ ಪ್ರಹಾರ ನಡೆಸಿದ್ದಾರೆ.

ಮೋದಿ ಸರ್ಕಾರ ತನ್ನ ಹೊಳಪು ಕಳೆದುಕೊಳ್ಳುತ್ತಿದೆ, ತನ್ನ ಪ್ರಗತಿಯ ಹಾಡಿಗೆ ತಾನೇ ತಡೆ ಸೃಉಷ್ಠಿಸಿಕೊಳ್ಳುತ್ತಿದೆ ಎಂದಿರುವ ಬಜಾಜ್, ಕಪ್ಪುಹಣದ ಕಾನೂನಿನ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಪ್ಪು ಹಣ ಕುರಿತ ಕಾನೂನನ್ನು ದ್ವೇಷದ ಕಾರಣವಿಟ್ಟುಕೊಂಡೇ ಮಾಡಿದಂತೆ ಕಾಣಿಸುತ್ತಿದೆ. ವಿದೇಶದಲ್ಲಿ ಅಸ್ತಿ ಇರುವುದನ್ನು ಬಹಿರಂಗಪಡಿಸಿರುವ ಜನರಿಗೆ ಈ ಕಾನೂನು ಮುಳುವಾಗಲಿದೆ ಎಂದು ಬಜಾಜ್ ಆತಂಕ ತೋರಿದ್ದಾರೆ.

ಹೊಸ ನಿಯಮದ ಪ್ರಕಾರ ಇರುವ ಆಸ್ತಿಯ ಶೇ.30 ರಷ್ಟು ಅಥವಾ ಬಹಿರಂಗಪಡಿಸಿದ ಅಕ್ರಮ ಆಸ್ತಿಯಶ್ಟೇ ಹಣವನ್ನು ದಂಡಾರೂಪದಲ್ಲಿ ಕೊಡಬೇಕೆಂದಿದ್ದು, ಈ ಕಾನೂನಿನಿಂದ ಅಸ್ತಿ ಬಹಿರಂಗವಾಗುವ ಸಾಧ್ಯತೆಗಿಂತ ಕೋರ್ಟ್ ಮೊರೆಹೋಗಿ ವಾದವಿವಾದಗಾಲ್ಲಿ ಕೇಸು ಜೀವನಪರ್ಯಂತ ಎಳೆದುಕೊಂಡು ಹೋಗುವ ಸಾಧ್ಯತೆಯೇ ಹೆಚ್ಚು ಎಂದು ಬಜಾಜ್ ಅಭಿಪ್ರಾಯಪಟ್ಟಿದ್ದಾರೆ.

ಇದರೊಂದಿಗೆ ಹಲವು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರದ ನಡೆಗಳ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT