ಮುಂಬೈ: ಲಂಚದ ಆರೋಪದಲ್ಲಿ ಸಿಲುಕಿರುವ ಅಮೆರಿಕ ಮೂಲದ ಕನ್ಸಲ್ಟೆಂಟ್ ಕಂಪನಿ ಲೂಯಿಸ್ ಬರ್ಗರ್ ಇಂಟರ್ ನ್ಯಾಷನಲ್‍ಗೆ ಭಾರತದಲ್ಲಿ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಗೋವಾದಲ್ಲಿ ಈಗಾಗಲೇ ಕಂಪನಿ ವಿರುದ್ಧ ತನಿಖೆ ನಡೆಯುತ್ತಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಕಂಪನಿ ಮುಂಬೈನಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಕುರಿತು ತನಿಖೆಗೆ ಆದೇಶಿಸಿ ದೆ. ಇದು ಭಾರತದಲ್ಲಿ ಇನ್ನಷ್ಟು ಕಾಮಗಾರಿಗಳ ಗುತ್ತಿಗೆ ಪಡೆಯುವ ಯತ್ನದಲ್ಲಿರುವ ಕಂಪನಿಗೆ ಹೊಡೆತ ನೀಡುವ ನಿರೀಕ್ಷೆ ಇದೆ.ಕಂಪನಿ ಉಪಾಧ್ಯಕ್ಷ ಲ್ಯಾರಿ ಡಿ. ವಾಲ್ಕರ್
ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.