ದೇಶ

ಫೇಸ್‍ಬುಕ್ ಲೋಪ ತೋರಿಸಿದ ಭಾರತೀಯ ಮೂಲದ ವಿದ್ಯಾರ್ಥಿ ಇಂಟರ್ನ್‍ಶಿಪ್ ಕಳ್ಕೊಂಡ!

Mainashree

ವಾಷಿಂಗ್ಟನ್: ತನ್ನ ಸಾಮಾಜಿಕ ತಾಣದಲ್ಲಿರುವ ಗೋಪ್ಯತೆ ವಿಷಯದ ಗಂಭೀರ ಲೋಪವನ್ನು ತೋರಿಸಿದ ಕಾರಣಕ್ಕೆ ಫೇಸ್ ಬುಕ್, ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿಯ ಇಂಟರ್ನ್‍ಶಿಪ್ ರದ್ದುಪಡಿಸಿದೆ.

ಫೇಸ್‍ಬುಕ್ ಕಂಪನಿಯಲ್ಲಿ ಇಂಟರ್ನಿಯಾಗಿದ್ದ ಅರಾನ್ ಖನ್ನಾ ಎಂಬ ವಿದ್ಯಾರ್ಥಿ, ಫೇಸ್‍ಬುಕ್ ಮೆಸೆಂಜರ್‍ನಿಂದ ಬಳಕೆದಾರರೊಬ್ಬರ ಸ್ಥಳ ಪತ್ತೆ ಮಾಡುವ ಮೂಲಕ ಗ್ರಾಹಕರ ಗೌಪ್ಯತೆ ಕಾಯ್ದುಕೊಳ್ಳುವ ಕಂಪನಿಯ ಭರವಸೆಯ ಲೋಪ ಎತ್ತಿ ತೋರಿಸಿದ್ದ.

ಜಾಲತಾಣದ ಈ ಲೋಪವನ್ನು ವಿವರಿಸುವ ಆತನ ಫೋಸ್ಟ್ ಜಗತ್ತಿನಾದ್ಯಂತ ಅಂತರ್ಜಾಲ ತಾಣಗಳಲ್ಲಿ ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಫೇಸ್‍ಬುಕ್, ಖನ್ನಾನ ಇಂಟರ್ನ್‍ಶಿಪ್ ರದ್ದು ಮಾಡಿದೆ.

SCROLL FOR NEXT