ಗುರ್‍ಗಾಂವ್: ಮಾನವನ ಉಪಯೋಗಕ್ಕೆಂದು ತಯಾರಾದ ರೊಬೋಟ್‍ಗಳು ಣವನ್ನೇ ತೆಗೆದರೆ ಹೇಗೆ? ಇದನ್ನು ಟರ್ಮಿನೇಟರ್, ಎಂದಿರನ್ ಮುಂತಾದ ಚಿತ್ರಗಳಲ್ಲಿ ಮಾತ್ರ ಕಂಡಿದ್ದವು. ದುರುಪಯೋಗ ಪಡಿಸಿಕೊಂಡಲ್ಲಿ ಅವು ಕೇಡುಮಾಡುತ್ತವೆ ಎಂದು ಸಿನಿಮಾಗಳಲ್ಲಿ ನೀತಿ ಹೇಳಲಾಗಿತ್ತು. ಆದರೆ ಅವುಗಳ ಕಾರ್ಯವೈಖರಿ ಹಾಗೂ ತಂತ್ರಜ್ಞಾನ ಅರ್ಥಮಾಡಿ ಕೊಳ್ಳದಿದ್ದಲ್ಲಿಯೂ ಜೀವಕ್ಕೆ ಮುಳುವಾಗಬಹು ದು ಎಂಬುದು ಗುರ್‍ಗಾಂವ್‍ನಲ್ಲಿ ನಡೆದ ದುರ್ಘಟನೆಂಯೊಂದು ತೋರಿಸಿಕೊಟ್ಟಿದೆ. ಜರ್ಮನಿಯ ಫೋಕ್ಸ್ ವ್ಯಾಗನ್ ಫ್ಯಾ ಕ್ಟರಿ ದುರ್ಘಟನೆ ಮರೆಯುವ ಮುನ್ನವೇ ಭಾರತದಲ್ಲೂ ರೋಬೋಟ್ ಅಟ್ಟಹಾಸ ಮೆರೆದಿದೆ. ಗುರ್‍ಗಾಂವ್‍ನ ಕೈಗಾರಿಕಾ ನಗರದಲ್ಲಿರುವ ಬಿಡಿಭಾಗ ತಯಾರಿಕಾ ಕಾರ್ಖಾನೆಯೊಂದರಲ್ಲಿ ವೆಲ್ಡಿಂಗ್ ಕೆಲಸಕ್ಕಾಗಿ ಒಂದು ರೊಬೋಟ್ ಇದೆ. ವೆಲ್ಡ್ ಮಾಡಬೇಕಾದ ಲೋಹದ ಹಾಳೆಗಳನ್ನು ಅದರ ಕೈಲಿಟ್ಟರೆ ಅದು ವೆಲ್ಡಿಂಗ್ ಕಡ್ಡಿಗಳನ್ನು ಬಳಸಿ ಕೆಲಸ ಪೂರೈಸುತ್ತದೆ. ಒಂದೂವರೆ ವರ್ಷದ ಹಿಂದೆ ಲೋಡರ್ ಆಗಿ ಕೆಲಸಕ್ಕೆ ಸೇರಿಕೊಂಡಿ ದ್ದ ರಾಮ್ ಜಿ(24) ರೊಬೋಟ್ ಬಗ್ಗೆ ತಿಳಿಯದೆಯೇ , ಕೊಂಚ ನಿರ್ಲಕ್ಷ್ಯದಿಂದ
ವ್ಯವಹರಿಸಿದ್ದಾನೆ. ವೆಲ್ಡಿಂಗ್ ಮಾಡಲು ತಯಾರಾಗಿದ್ದ ರೊಬೋಟ್ ತನ್ನ ಕೈಲಿದ್ದ ಚೂಪಾದ ವೆಲ್ಡಿಂಗ್ ಕಡ್ಡಿಗಳನ್ನು ಶರವೇಗದಲ್ಲಿ ಆತನ ದೇಹಕ್ಕೆ ತಿವಿದು ಸೀಳಿಹಾಕಿದೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಮಾವುದೇ ಫಲ ಸಿಗದೇ ರಾಮ್ ಜೀ ಅಸುನೀಗಿದ್ದಾನೆ. 39 ರೊಬೋಟ್‍ಗಳಿರುವ ಆ ಫ್ಯಾಕ್ಟರಿಯಲ್ಲಿ 63 ಮಂದಿ ಕಾರ್ಯನಿರತರಾಗಿದ್ದರು. ಅವರ ಕಣ್ಣೆದುರಲ್ಲೇ ಈ ದೃಶ್ಯ ನಡೆಯುತ್ತಿದ್ದರೂ ಅಸಹಾಯಕರಾಗಿ ನೋಡುವ ಸ್ಥಿತಿ ಅವರದಾಗಿತ್ತು.