ನವದೆಹಲಿ: ಭಯೋತ್ಪಾದಕರಿಂದ, ಆತಂಕವಾದಿಗಳಿಂದ ಜೀವ ಬೆದರಿಕೆ ಇದ್ದರು ಮತ್ತೊಮ್ಮೆ ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ಅವರು ಬುಲೆಟ್ ಪ್ರೂಫ್ ಗ್ಲಾಸ್ ಇಲ್ಲದೆ ಸಾಮಾನ್ಯ ಪ್ರಜೆಯಂತೆ ಭಾಷಣ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಹಲವಾರು ಜೀವ ಬೆದರಿಕೆ ಬಂದಿದ್ದು ಬುಲೆಟ್ ಪ್ರೂಫ್ ಗ್ಲಾಸ್ ಇಲ್ಲದೇ ಭಾಷಣ ಮಾಡುವುದು ಅವರ ಪ್ರಾಣಕ್ಕೆ ಅಪಾಯ ತರಬಹುದು. ಹೀಗಾಗಿ ಈ ಬಾರಿ ಬುಲೆಟ್ ಪ್ರೂಫ್ ಗ್ಲಾಸ್ ಬಳಸಲು ಭದ್ರತಾ ಸಂಸ್ಥೆ ಸಲಹೆ ನೀಡಿತ್ತು. ಈ ಬಾರಿ ಮೋದಿ ಅವರು ಏನು ಮಾಡುತ್ತಾರೆ ಎಂಬುದು ಕುತೂಹಲ ಮೂಡಿತ್ತು.
ಕಳೆದ ಬಾರಿ ಭದ್ರತಾ ಪಡೆಯ ಸಲಹೆಯನ್ನು ಕಡೆಗಣಿಸಿ ಪ್ರಧಾನಿ ಮೋದಿಯ ಬುಲೆಟ್ ಪ್ರೂಫ್ ಗ್ಲಾಸ್ ನ್ನು ತೆಗೆಯುವಂತೆ ಆದೇಶ ನೀಡಿದ್ದರು. ಹೀಗಾಗಿ ಭಾಷಣ ಮಾಡುವ ಕೆಲ ಗಂಟೆಗಳ ಮೊದಲೇ ಬುಲೆಟ್ ಪ್ರೂಫ್ ಗ್ಲಾಸ್ ನ್ನು ತೆಗೆದಿರಿಸಲಾಗಿತ್ತು.