ಶಿರಚ್ಛೇದ 
ದೇಶ

ಸೋದರ ಸಂಬಂಧಿ ಜತೆ ಪ್ರೇಮಬಂಧ: ತಂಗಿಯ ತಲೆ ಕಡಿದ ಸಹೋದರರು

ಸೋದರ ಸಂಬಂಧಿ ಹುಡುಗನ ಜತೆ ಪ್ರೇಮ ಸಂಬಂಧ ಹೊಂದಿದ ಕಾರಣಕ್ಕೆ ಸಹೋದರರಿಬ್ಬರು ತಮ್ಮ ತಂಗಿಯ ತಲೆಯನ್ನು ಕಡಿದು ಅದನ್ನು ತಮ್ಮ ಗ್ರಾಮದಲ್ಲಿ...

ಶಹಜಹಾನ್‌ಪುರ(ಉತ್ತರಪ್ರದೇಶ): ಸೋದರ ಸಂಬಂಧಿ ಹುಡುಗನ ಜತೆ ಪ್ರೇಮ ಸಂಬಂಧ ಹೊಂದಿದ ಕಾರಣಕ್ಕೆ ಸಹೋದರರಿಬ್ಬರು ತಮ್ಮ ತಂಗಿಯ ತಲೆಯನ್ನು ಕಡಿದು ಅದನ್ನು ತಮ್ಮ ಗ್ರಾಮದಲ್ಲಿ ಎಲ್ಲರ ಮುಂದೆ ಪ್ರದರ್ಶಿಸಿದ ಭೀಭತ್ಸಕರ ಘಟನೆ ವರದಿಯಾಗಿದೆ.

ಸಹೋದರರಾದ 25 ವರ್ಷದ ಗುಲ್‌ ಹಸನ್‌ ಮತ್ತು 20 ವರ್ಷದ ನನ್‌ಹೇ ತಮ್ಮ 17ವರ್ಷದ ಸಹೋದರಿ ಫೂಲ್ ಜಹಾನ್ ಳ ತಲೆ ಕಡಿದು ಗ್ರಾಮದಲ್ಲೇಲ್ಲ ಪ್ರದರ್ಶಿಸಿ ನಂತರ ನಾಪತ್ತೆಯಾಗಿದ್ದಾರೆ.

ಘಟನೆ ವಿವರ:
ಮದುವೆಯಾಗ ಬಯಸಿದ್ದ ಸೋದರ ಸಂಬಂಧಿ ಹುಡುಗನ ಮನೆಯ ಎದುರು ಫೂಲ್ ಜಹಾನ್ ನಿಂತಿರುವುದನ್ನು ಕಂಡು ವ್ಯಗ್ರರಾದ ಕೊಲೆಗಡುಕ ಸಹೋದರರು, ತಮ್ಮ ತಂಗಿಯನ್ನು ಗ್ರಾಮದ ನಡು ಭಾಗದಲ್ಲಿನ ಚೌಕಕ್ಕೆ ದರದರನೆ ಎಳೆದುಕೊಂಡು ಬಂದಿದ್ದಾರೆ. ಗ್ರಾಮದ ಚೌಕವನ್ನು ತಲುಪಿದಾಗ ಅಲ್ಲಿ ಅವರು ಆಕೆಯ ತಲೆಯನ್ನು ಕಡಿದರು ಬಳಿಕ ರಕ್ತ ಸುರಿಯುತ್ತಿದ್ದ ತಲೆಯ ಭಾಗವನ್ನು ಸುಮಾರು ಒಂದು ತಾಸು ಕಾಲ ಗ್ರಾಮದಲ್ಲೆಲ್ಲ ಸುತ್ತಾಡಿಸಿ ಜನರ ಮುಂದೆ ಪ್ರದರ್ಶಿಸಿದ್ದಾರೆ.

ಈ ವೇಳೆ, ಗ್ರಾಮದಲ್ಲಿನ ಇತರ ಹುಡುಗಿಯರಿಗೆ ಇದೊಂದು ಪಾಠ. ನಮ್ಮ ಪುತ್ರಿಯರು ಮತ್ತು ಸಹೋದರಿಯರು ಯಾವುದೇ ರೀತಿಯ ಅನೈತಿಕ ಸಂಬಂಧ ಹೊಂದಲು ನಾವು ಬಿಡುವುದಿಲ್ಲ ಎಂದು ಕೂಗಾಡಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಸದ್ಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT