ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಹಾಗೂ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ (ಸಂಗ್ರಹ ಚಿತ್ರ) 
ದೇಶ

ಆಸ್ಟ್ರೇಲಿಯಾ-ಭಾರತ ಶಿಕ್ಷಣ ರಾಯಭಾರಿಯಾಗಿ ಆಡಂ ಗಿಲ್ ಕ್ರಿಸ್ಟ್ ಆಯ್ಕೆ

ಭಾರತ-ಆಸ್ಟೇಲಿಯಾದ ಮಹತ್ವದ ಒಪ್ಪಂದಗಳಲ್ಲಿ ಒಂದಾದ ಶಿಕ್ಷಣ ಒಪ್ಪಂದಕ್ಕೆ ಬದ್ಧವಾಗಿರುವ ಆಸ್ಟ್ರೇಲಿಯಾ ದೇಶವು ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ-ಭಾರತದ ಶಿಕ್ಷಣದ ರಾಯಭಾರಿಯಾಗಿ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಹಾಗೂ ವಿಕೆಟ್ ಕೀಪರ್...

ಮೆಲ್ಬರ್ನ್: ಭಾರತ-ಆಸ್ಟೇಲಿಯಾದ ಮಹತ್ವದ ಒಪ್ಪಂದಗಳಲ್ಲಿ ಒಂದಾದ ಶಿಕ್ಷಣ ಒಪ್ಪಂದಕ್ಕೆ ಬದ್ಧವಾಗಿರುವ ಆಸ್ಟ್ರೇಲಿಯಾ ದೇಶವು ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ-ಭಾರತದ ಶಿಕ್ಷಣದ ರಾಯಭಾರಿಯಾಗಿ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಹಾಗೂ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ ಅವರನ್ನು ಗುರುವಾರ ಆಯ್ಕೆ ಮಾಡಿದೆ.

ಆಗಸ್ಟ್ 24 ರಂದು 3ನೇ ಬಾರಿಗೆ ನವದೆಹಲಿ ನಡೆಯುವ ಆಸ್ಟ್ರೇಲಿಯಾ-ಭಾರತ ಶಿಕ್ಷಣ ಮಂಡಳಿ ಸಭೆ ಹಿನ್ನೆಲೆಯಲ್ಲಿ ಆಸ್ಟೇಲಿಯಾದ ಸರ್ಕಾರ ಇದೀಗ ಆಸ್ಟ್ರೇಲಿಯಾ-ಭಾರತದ ಶಿಕ್ಷಣ ರಾಯಭಾರಿಯಾಗಿ ಗಿಲ್ ಕ್ರಿಸ್ಟ್ ಅವರನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಅಧಿಕೃತವಾಗಿ ಘೋಷಣೆ ಮಾಡಿರುವ ಆಸ್ಟೇಲಿಯಾ ಶಿಕ್ಷ ಸಚಿವ ಕ್ರಿಸ್ಟೋಫರ್ ಪೈನೆ  ಪ್ರಿಯೋರ್ ಅವರು, ಆಡಂ ಗಿಲ್ ಕ್ರಿಸ್ಟ್ ಅವರನ್ನು ಆಸ್ಟ್ರೇಲಿಯಾ ಭಾರತೀಯ ಶಿಕ್ಷಣ ರಾಯಭಾರಿಯಾಗಿ ಘೋಷಣೆ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ಭಾರತದ ಶಿಕ್ಷಣ ಬಾಂಧವ್ಯ ಕುರಿತಂತೆ ಗಿಲ್ ಕ್ರಿಸ್ಟ್ ಅವರನ್ನು ಉತ್ತಮ ಪಾತ್ರ ನಿರ್ವಹಿಸುತ್ತಾರೆಂಬುದರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಆಡಂ ಗಿಲ್ ಕ್ರಿಸ್ಟ್ ಅವರನ್ನು ಭಾರತೀಯರು ಒಬ್ಬ ಕ್ರಿಕೆಟರ್ ಆಗಿ ಮಾತ್ರ ನೋಡಿದ್ದರು. ಇನ್ನು ಮುಂದಿನ ದಿನಗಳಲ್ಲಿ ಶಿಕ್ಷಣದ ಕುರಿತಂತೆ ಗಿಲ್ ಕ್ರಿಸ್ಟ್ ಅವರಿಗಿರುವ ಶ್ರೇಷ್ಟತೆ ಹಾಗೂ ಸಮಗ್ರತೆಯ ಬಗ್ಗೆಯೂ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.

ಭಾರತ-ಆಸ್ಟ್ರೇಲಿಯಾದ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಈಗಾಗಲೇ ಸಂತಸ ವ್ಯಕ್ತಪಡಿಸಿರುವ ಆಡಂ ಗಿಲ್ ಕ್ರಿಸ್ಟ್ ಅವರು, ಇದೊಂದು ದೊಡ್ಡ ಸವಾಲಿನ ಕೆಲಸ. ಆದರೂ, ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಹೊಸ ಪಾತ್ರ ನಿರ್ವಹಿಸಲು ಉತ್ಸುಕನಾಗಿದ್ದೇನೆ. ಎರಡು ದೇಶಗಳ ಮಧ್ಯೆ ಶಿಕ್ಷಣದ ಪಾತ್ರ ಅತ್ಯಂತ ಮಹತ್ವವಾದದ್ದು, ಇಂತಹ ದೊಡ್ಡ ಜವಾಬ್ದಾರಿ ಇದೀಗ ನನ್ನ ಮೇಲಿದೆ. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇನೆಂಬುದರ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!