ದೇಶ

ಬಾನಾಡಿಯಲ್ಲಿ ಹಾರಾಡಿದ ಬಡ ಮಕ್ಕಳು

Sumana Upadhyaya

ನವದೆಹಲಿ: ಬಾನಲ್ಲಿ ಹಕ್ಕಿಯಂತೆ ಹಾರಾಡಬೇಕೆಂಬ ಆಸೆಯಿರುವ ಬಡ ಮಕ್ಕಳ ಕನಸಿಗೆ ಬೀಜ ಬಿತ್ತಲು ಮತ್ತು ಅವರ ಮನಸ್ಸಿನಲ್ಲಿ ಧನಾತ್ಮಕ ಯೋಚನೆ ಮೂಡುವಂತೆ ಮಾಡಲು ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ ವೇಸ್ 130 ಮಕ್ಕಳಿಗೆ ಒಂದು ಗಂಟೆಗಳ ಕಾಲ ಬಾನಾಡಿಯಲ್ಲಿ ವಿಶೇಷ ಹಾರಾಟ ಅವಕಾಶ ಕಲ್ಪಿಸಿತು.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಹಾರಾಟ ವ್ಯವಸ್ಥೆ ಮಾಡಲಾಗಿದ್ದು, ಕ್ರಿಕೆಟ್ ಪಟು ಯುವರಾಜ್ ಸಿಂಗ್ ನಾಯಕತ್ವದ ಯು ವಿ ಕ್ಯಾನ್ ಮತ್ತು ದೆಹಲಿ ನಗರ ಮೂಲದ ಎಸ್ ಡಿಎಂಸಿ ಪ್ರೈಮರಿ ಶಾಲೆ ಜೊತೆ ಸೇರಿ ಬಡ ಮಕ್ಕಳಿಗೆ ಫ್ಲೈಟ್ ಆಫ್ ಫ್ಯಾಂಟಸಿ ಎಂಬ ವಿಶೇಷ ಹಾರಾಟ ವ್ಯವಸ್ಥೆಯನ್ನು ಮಾಡಲಾಯಿತು ಎಂದು ಜೆಟ್ ಏರ್ ವೇಸ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ವದೇಶಿ ನಿರ್ಮಿತ ಬೋಯಿಂಗ್ 737-800 ವಿಮಾನ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ನಿನ್ನೆ ಮಧ್ಯಾಹ್ನ ಹಾರಾಟ ಆರಂಭಿಸಿತು.ಇದರಲ್ಲಿ ಭಾಗವಹಿಸಿದ ಮಕ್ಕಳು, ವಿಶೇಷ ಅತಿಥಿಗಳು ಖುಷಿಪಟ್ಟರು. ಬಡ ಮಕ್ಕಳ ಮನಸ್ಸಿನಲ್ಲಿ ಧನಾತ್ಮಕ ಯೋಚನೆ ಹುಟ್ಟಿಸುವುದು ನಮ್ಮ ಉದ್ದೇಶವಾಗಿತ್ತು. ವಿಮಾನದಲ್ಲಿ ಕುಳಿತುಕೊಂಡು ಹಾರಾಡುವಾಗ ಮಕ್ಕಳ ಮುಖದಲ್ಲಿನ ಸಂತೋಷ ನೋಡಿ ನಮಗೆ ಧನ್ಯತೆ ಭಾವ ಮೂಡಿತು ಎಂದು ಜೆಟ್ ಏರ್ ವೇಸ್ ನ ಮುಖ್ಯ ಕಾರ್ಯನಿರ್ವಾಹಕ ಕ್ರೇಮರ್ ಬಾಲ್ ತಿಳಿಸಿದ್ದಾರೆ. ಜೆಟ್ ಏರ್ ವೇಸ್ ಮಕ್ಕಳ ಶಿಕ್ಷಣ ಅಭಿಯಾನವನ್ನು ಕೈಗೊಂಡಿದೆ.

SCROLL FOR NEXT