ದೇಶ

ಇನ್ಮುಂದೆ ಆನ್ ಲೈನ್ ನಲ್ಲಿ ಎಲ್ ಪಿಜಿ ಹೊಸ ಸಂಪರ್ಕ

Shilpa D

ನವದೆಹಲಿ: ಎಲ್ ಪಿಜಿ ಹೊಸ ಸಂಪರ್ಕ ಪಡೆದುಕೊಳ್ಳಬೇಕೆಂದು ಬಯಸಲು ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿ. ಹೊಸ ಸಂಪರ್ಕ ಪಡೆದುಕೊಳ್ಳಲು ಡೀಲರ್ ಗಳ ಬಳಿ ಅಲೆಯುವ ಅವಶ್ಯಕತೆಯಿಲ್ಲ, ಇನ್ಮುಂದೆ  ಆನ್ ಲೈನ್ ಮೂಲಕವೇ ಎಲ್ ಪಿಜಿ ಯ ಹೊಸ ಕನೆಕ್ಷನ್ ಪಡೆಯಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕನಸಿನ ಕೂಸು ಡಿಜಿಟಲ್ ಇಂಡಿಯಾ ಪರಿಣಾಮ ಎಲ್ ಪಿಜಿ ಕನೆಕ್ಷನ್ ಅನ್ನು ಆನ್ ಲೈನ್ ನಲ್ಲಿ ಪಡೆಯಬಹುದಾಗಿದೆ. ಹೊಸ ಎಲ್ ಪಿಜಿ ಸಂಪರ್ಕ ಪಡೆಯುವಾಗ ಕಡ್ಡಾಯವಾಗಿ ಸ್ಟವ್ ಕೊಂಡುಕೊಳ್ಳಬೇಕೆಂಬ ಡೀಲರ್ ಗಳ ಕಿರಿಕಿರಿ ಇರುವುದಿಲ್ಲ. ನಿಮಗೆ ಅವಶ್ಯಕತೆಯಿದ್ದರೆ ಮಾತ್ರ ಸ್ಟವ್ ಕೊಂಡು ಕೊಳ್ಳುವ ಆಫ್ಷನ್ ಇರುತ್ತದೆ.

ಜೊತೆಗೆ ಹೊಸ ಸಂಪರ್ಕ ಪಡೆಯಲು ಹೆಚ್ಚಿನ ಸಮಯದ ಅವಶ್ಯಕತೆ ಇರುವುದಿಲ್ಲ. ಶೀಘ್ರವೇ ಎಲ್ ಪಿಜಿ ಕನೆಕ್ಷನ್ ಸಿಗುತ್ತದೆ. ಸರ್ಕಾರಿ ಎಲ್ ಪಿಜಿ ಪೋರ್ಟಲ್ ಪಹಲ್ ನಲ್ಲಿ ಬುಕ್ ಮಾಡಬಹುದು. ತೈಲ ಕಂಪನಿಗಳ ವೆಬ್ ಸೈಟ್ ನಲ್ಲೂ ಕೂಡ ಬುಕ್ ಮಾಡಬಹುದಾಗಿದೆ. ಶೀಘ್ರವೇ ತೈಲ ಕಂಪನಿಗಳು ಈ ಸೇವೆ ಆರಂಭಿಸಲಿವೆ.

ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಗ್ರಾಹಕರ ಸಂಖ್ಯೆ ನಿಮ್ಮ ಇ -ಮೇಲ್ ಐಡಿ ಇಲ್ಲವೇ ಮೊಬೈಲ್ ಗೆ ಮೆಸೇಜ್ ರೂಪದಲ್ಲಿ ಬರುತ್ತದೆ. ನಂತರ ಆನ್ ಲೈನ್ ನಲ್ಲೇ ಹೊಸ ಸಂಪರ್ಕಕ್ಕೆ ಬೇಕಾದ ಹಣವನ್ನು ಪಾವತಿಸಬೇಕಾಗುತ್ತದೆ. ಇದಾದ ನಂತರ ಡೀಲರ್ ನಿಮಗೆ ಸಿಲಿಂಡರ್, ರೆಗ್ಯೂಲೇಟರ್ ಮತ್ತು ರಬ್ಬರ್ ಪೈಪ್ ತಲುಪಿಸುತ್ತಾರೆ, ಕೇವಲ ಒಂದು ವಾರದೊಳಗೆ ಎಲ್ಲಾ ಪ್ರಕ್ರಿಯೆ ಮುಗಿದು ಎಲ್ ಪಿಜಿ ಸಂಪರ್ಕ ಪಡೆಯಬಹುದಾಗಿದೆ.


SCROLL FOR NEXT