ದಾವೂದ್ ಇಬ್ರಾಹಿಂ(ಸಂಗ್ರಹ ಚಿತ್ರ) 
ದೇಶ

ದಾವೂದ್ ಕರಾಚಿಯಲ್ಲಿದ್ದಾರೆಂದು ಖಚಿತಪಡಿಸಿದ ಪತ್ನಿ: ವರದಿ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾ ನೆ ಎಂಬ ಭಾರತದ ರಕ್ಷಣಾ ಇಲಾಖೆ ಮಾಹಿತಿಗೆ ಆಧಾರವಾಗಿ...

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾ ನೆ ಎಂಬ ಭಾರತದ ರಕ್ಷಣಾ ಇಲಾಖೆ ಮಾಹಿತಿಗೆ ಆಧಾರವಾಗಿ, ದಾವೂದ್ ಇಬ್ರಾಹಿಂ ಪತ್ನಿ ಎಂದು ಗುರುತಿಸಿಕೊಂಡಿರುವ ಮಹಿಳೆಯನ್ನು ಸುದ್ದಿ ವಾಹಿನಿಯೊಂದು ಸಂಪರ್ಕಿಸಿದ್ದು, ಆತ ಕರಾಚಿಯಲ್ಲಿದ್ದಾನೆ ಎಂಬ ವಿಷಯವನ್ನು ಖಚಿತಪಡಿಸಿದ್ದಾಳೆ ಎಂದು ವರದಿ ಮಾಡಿದೆ.

ಟೈಮ್ಸ್ ನೌ ಸುದ್ದಿ ವಾಹಿನಿಯ ವರದಿಗಾರರೊಬ್ಬರು ಮೆಹ್ಜಬೀನ್ ಶೇಕ್ ಎಂಬ ಮಹಿಳೆಯನ್ನು ದೂರವಾಣಿ ಮೂಲಕ ಮಾತನಾಡಿಸಿದ್ದು, ತಾನು ದಾವೂದ್ ಇಬ್ರಾಹಿಂ ಪತ್ನಿಯೆಂದೂ, ತಾನು ಕರಾಚಿಯಲ್ಲಿರುವುದಾಗಿಯೂ ಖಚಿತಪಡಿಸಿದ್ದಾಳೆ. ಪತಿಗೆ ದೂರವಾಣಿ ನೀಡಲು ಹೇಳಿದಾಗ ಅವರು ನಿದ್ದೆ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ. ಏಪ್ರಿಲ್ ತಿಂಗಳ ದೂರವಾಣಿ ಬಿಲ್ ನಲ್ಲಿ ಆಕೆಯ ಹೆಸರಿದ್ದು, ಅದರಲ್ಲಿ ಅವಳು ಕರಾಚಿಯಲ್ಲಿ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸಿಸುತ್ತಿರುವುದಾಗಿ ತಿಳಿದುಬಂದಿದೆ.

ದಾವೂದ್ ಪತ್ನಿ, ಪುತ್ರ ಮೊಯೀನ್ ನವಾಜ್ ಹಾಗೂ ಇಬ್ಬರು ಪುತ್ರಿಯರಾದ ಮೆಹ್ರುಕ್ ಮತ್ತು ಮಜಿಯಾ ಎಲ್ಲರೂ ಪಾಕಿಸ್ತಾನದಲ್ಲಿ ಜೀವಿಸುತ್ತಿದ್ದು, ದಾವೂದ್ ಪ್ರಸ್ತುತ ಕರಾಚಿಯ ನೆರೆ ಪ್ರದೇಶ ಕ್ಲಿಫ್ಟೋನ್ ನಲ್ಲಿ ವಾಸಿಸುತ್ತಿದ್ದಾನೆ ಎಂದು ಭಾರತೀಯ ರಕ್ಷಣಾ ಇಲಾಖೆ ತಿಳಿಸಿರುವು ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ರಕ್ಷಣಾ ಇಲಾಖೆಗೆ ಸಿಕ್ಕಿರುವ ಇನ್ನಷ್ಟು ಪುರಾವೆಗಳ ಪ್ರಕಾರ, ದಾವೂದ್ ಕುಟುಂಬ ಪಾಕಿಸ್ತಾನ ಮತ್ತು ದುಬೈ ನಡುವೆ ಪ್ರಯಾಣಿಸಿವೆ. ದಾವೂದ್ ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಖದ ಚಹರೆಯನ್ನು ಬದಲಾಯಿಸಿಕೊಂಡಿದ್ದು, ಆತನ ಪಾಕಿಸ್ತಾನದ ಪಾಸ್ ಪೋರ್ಟ್ ನಲ್ಲಿ ಶೇಕ್ ದಾವೂದ್ ಹಸನ್ ಎಂದು ಹೆಸರಿದೆ. 59 ವರ್ಷದ ದಾವೂದ್ ಇಬ್ರಾಹಿಂ ಬಳಿ ಕನಿಷ್ಠ ಮೂರು ಪಾಸ್ ಪೋರ್ಟ್ ಗಳಿವೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಅಸ್ಸಾಂ ವಿಧಾನಸಭೆಯಲ್ಲಿ ಹೈಡ್ರಾಮ: ವಿಪಕ್ಷಗಳ ಪ್ರತಿಭಟನೆ ನಡುವೆಯೇ UCC ಮಸೂದೆ ಅಂಗೀಕಾರ! ಬಹು ಪತ್ನಿತ್ವಕ್ಕೆ ಜೈಲು ಶಿಕ್ಷೆ

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

ಚಿತ್ರದುರ್ಗ: ನಿಂತಿದ್ದ ಲಾರಿಗೆ ಬೊಲೆರೋ ಡಿಕ್ಕಿ; ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದುರ್ಮರಣ

SCROLL FOR NEXT