ನವದೆಹಲಿ: ಎನ್‌ಡಿಎ ಸರ್ಕಾರ ಬಿಡುಗಡೆ ಮಾಡಿರುವ 2011ರ ಜನಗಣತಿಯಲ್ಲಿ ದೇಶದಲ್ಲಿನ ಹಿಂದು ಜನಸಂಖ್ಯೆ ಶೇ.0.7ರಷ್ಟು ಕಡಿಮೆಯಾಗಿದ್ದು, ಮುಸ್ಲಿಂ ಜನಸಂಖ್ಯೆ ಶೇ.0.8ರಷ್ಟು ಹೆಚ್ಚಿರುವುದು ಬಹಿರಂಗಗೊಂಡಿದೆ.
2001- 2011ರ ಧಾರ್ಮಿಕ ಸಮುದಾಯಗಳ ಜನಗಣತಿಯ ಅಂಕಿ - ಅಂಶಗಳಿಂದ, ದೇಶದ ಒಟ್ಟು ಜನಸಂಖ್ಯೆಯು ಶೇ.17.7ರಷ್ಟು ಏರಿದ್ದು, ದೇಶದಲ್ಲಿನ ಇತರೆಲ್ಲ ಧಾರ್ಮಿಕ ಸಮುದಾಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಜನಸಂಖ್ಯಾ ವೃದ್ಧಿದರ ಹೆಚ್ಚಿದೆ.
ದೇಶದ ಒಟ್ಟು ಜನಸಂಖ್ಯೆಯು 2011ರಲ್ಲಿ 121.09 ಕೋಟಿ ಇರುವುದು ಅಂಕಿ-ಅಂಶಗಳಲ್ಲಿ ದಾಖಲಾಗಿದೆ. ಇದರಲ್ಲಿ ಹಿಂದುಗಳ ಜನಸಂಖ್ಯೆ 96.63 ಕೋಟಿ (79.8%) ಮುಸ್ಲಿಮರು 17.22 ಕೋಟಿ (14.2%), ಕ್ರೈಸ್ತರು 2.78 ಕೋಟಿ (2.3%). ಸಿಕ್ಖರು 2.08 ಕೋಟಿ (1.7%), ಬೌದ್ಧರು 0.84 ಕೋಟಿ (0.7%), ಜೈನರು 0.45 ಕೋಟಿ (0.4%), ಇತರ ಧರ್ಮೀಯರು ಮತ್ತು ಅನುಯಾಯಿಗಳು (ಓಆರ್‌ಪಿ) 0.79 ಕೋಟಿ (.07%) ಮತ್ತು ಧರ್ಮ ಘೋಷಣೆ ಮಾಡದವರು 0.29 ಕೋಟಿ (0.2%).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics