ನವದೆಹಲಿ: ಹಿಂದೆಲ್ಲಾ ಗುರುಗಳು, ಸಂನ್ಯಾಸಿಗಳು ಅಂದರೆ ಭಯ, ಭಕ್ತಿ ಮೂಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಯಂ ಘೋಷಿತ ದೇವಮಾನವರ ಸಂಖ್ಯೆ ಹೆಚ್ಚುತ್ತಿದ್ದು, ಅವರ ಹೀನ ಕೃತ್ಯಗಳು ಹೆಚ್ಚುತ್ತಿವೆ. ಜೊತೆಗೆ ಸದಾ ಒಂದಿಲ್ಲೊಂದು ವಿಷಯದಿಂದ ಸುದ್ದಿಯಾಗುತ್ತಲೇ ಇದ್ದಾರೆ. ಇದರಿಂದ ದೇವ ಮಾನವರು ಗುರುಗಳ ಬಗ್ಗೆ ಜನತೆಗೆ ಒಂದು ರೀತಿಯ ನಿರ್ಲಕ್ಷ್ಯ, ಬೇಸರ ಭಾವ ಮೂಡುತ್ತಿದೆ.
ತಾವು ದೇವ ಮಾನವರೆಂದು ಹೇಳಿಕೊಳ್ಳುವ ಇವರು ಮಾಡ ಬಾರದ್ದನ್ನು ಮಾಡಿ ಜೈಲು ಸೇರುತ್ತಿದ್ದಾರೆ. ಅತ್ಯಾಚಾರ, ಕೊಲೆ, ವಂಚನೆ, ಫೋರ್ಜರಿ, ಅಸಭ್ಯ ವರ್ತನೆ, ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗವಹಿಸಿ ಜನತೆಯಲ್ಲಿ ಅಸಹ್ಯ ತರುತ್ತಿದ್ದಾರೆ.
ರಾಧೆ ಮಾ: ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ. ಈಕೆ ಕೆಲ ಬಾಲಿವುಡ್ ಮಂದಿ ಹಾಗೂ ರಾಜಕಾರಣಿಗಳ ಆರಾಧ್ಯ ದೇವತೆ. ಈಕೆಗೆ ಬ್ಲೂಫಿಲಂ ನಟಿ ಸನ್ನಿ ಲಿಯೋನ್ ಮೆಚ್ಚಿನ ಹಿರೋಯಿನ್. ಈಕೆ ತನ್ನ ಅನುಯಾಯಿಯ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾಳೆ.
ಅಸಾರಾಂ ಬಾಪು: 73 ವರ್ಷದ ಮತ್ತೊಬ್ಬ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು. ಈತನ ವಿರುದ್ಧ ಇರುವ ಆರೋಪಗಳು ಒಂದೆರಡಲ್ಲಾ. ಸಹೋದರಿಯರ ಮೇಲೆ ಅತ್ಯಾಚಾರ. ಅಪ್ರಾಪ್ತ ಬಾಲಕಿ ಕೊಲೆ, ಸಾಕ್ಷಿಗಳ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅಸಾರಾಂ ಬಾಪು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಕೂಡ ತನ್ನ ತಂದೆಯಂತೆಯೇ ಆಶ್ರಮದ ಬಾಲಕಿ ಮೇಲೆ ಸತತವಾಗಿ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿತನಾಗಿದ್ದಾರೆ.
ಸಾರಥಿ ಬಾಬಾ ಒಡಿಸ್ಸಾದ ಮತ್ತೊಬ್ಬ ಸ್ವಯಂ ಘೋಷಿತ ದೇವಮಾನವ ಸಾರಥಿ ಬಾಬಾ ಅಲಿಯಾಸ್ ಸಂತೋಷ್ ರೌಲ್ ವಂಚನೆ, ಫೋರ್ಜರಿ ಪ್ರಕರಣಗಳಲ್ಲಿ ಕಟಕ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
ಸಂತ ರಾಮ್ ಪಾಲ್ಜಿ ಮಹಾರಾಜ್: ಹರ್ಯಾಣದ ಮತ್ತೊಬ್ಬ ದೇವಮಾನವ ಸಂತ ರಾಮ್ ಪಾಲ್ಜಿ ಮಹಾರಾಜ್ ವಿರುದ್ಧ ಹಲವು ಕ್ರಿಮಿನಲ್ ಕೇಸ್ ಗಳು ದಾಖಲಾಗಿದ್ದು. ಕೊಲೆ ಆರೋಪ ಕೂಡ ಎದುರಿಸುತ್ತಿದ್ದಾರೆ. ಮಾರ್ಚ್ 2015 ರಲ್ಲಿ ಈತನ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ.
ಇನ್ನು ಕರ್ನಾಟಕದ ಬಿಡದಿಯ ನಿತ್ಯಾನಂದ ಸ್ವಾಮೀಜಿ ನಟಿಯೊಬ್ಬಳ ಜೊತೆ ಲೈಂಗಿಕ ಕ್ರಿಯೆ ನಡೆಸಿ ಟಿವಿ ಟಾನೆಲ್ ಗಳಲ್ಲಿ ಪ್ರಸಾರವಾಗಿ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಒಟ್ಟಿನಲ್ಲಿ ಈ ಎಲ್ಲಾ ಸ್ವಯಂ ಘೋಷಿತ ದೇವಮಾನವರುಗಳು ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಲ್ಲಿದ್ದಾರೆ.