ದೇಶ

ಮುಂಬಯಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ದಾವೂದ್ ಇಬ್ರಾಹಿಂ ಜೊತೆ ನಂಟು!

Shilpa D

ದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದರ ಬಗ್ಗೆ ಭಾರತ ಸರ್ಕಾರ ಸಾಕ್ಷ್ಯಾಧಾರಗಳನ್ನು ಒದಗಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಯಲಾಗಿದೆ.

ಮುಂಬಯಿನ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರ ಜೊತೆ ನಂಟು ಹೊಂದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ನವದೆಹಲಿಯಲ್ಲಿರುವ ಅಮೆರಿಕಾ ರಾಯಭಾರ ಕಚೇರಿ, 2005j ಆಗಸ್ಟ್ 8 ರಂದು ವಾಷಿಂಗ್ಟನ್ ಗೆ ಟೆಲಿಗ್ರಾಮ್ ಮೂಲಕ ಸಂದೇಶ ರವಾನಿಸಿದೆ. ಇನ್ನೂ ಟೆಲಿಗ್ರಾಮ್ ನಲ್ಲಿ ಬಂಧಿತ ವಿಕಿ ಮಲ್ಹೋತ್ರಾ ಮತ್ತು ಫಾರಿದ್ ತನಾಶಾ ಬಗ್ಗೆಯೂ ಕೂಡ ತಿಳಿಸಿದೆ.

ಇನ್ನು ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮುಂಬಯಿ ಪೊಲೀಸ್ ಆಯುಕ್ತ ಎ ಎನ್ ರಾಯ್ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದಾರೆಂಬ ಆರೋಪ ಎದುರಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಅಸ್ಲಂ ಮೊಮಿನ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಸ್ಲಂ ಮೊಮಿನ್ ದಾವೂದ್ ಜೊತೆ ನಂಟು ಹೊಂದಿರುವ ಸಂಬಂಧ ಗುಪ್ತಚರ ಇಲಾಖೆ ಸೂಕ್ತ ಸಾಕ್ಷ್ಯಾಧಾರಗಳನ್ನು ತನ್ನ ವರದಿಯಲ್ಲಿ ನೀಡಿದೆ.

ಈ ಮಾಹಿತಿ ಛೋಟಾ ರಾಜನ್ ಸಹಚರರನ್ನು ಬಂಧಿಸಿದ ಕೆಲವು ದಿನಗಳ ನಂತರ ಬಹಿರಂಗವಾಗಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ಅಸ್ಲಂ ಮೊಮಿನ್ ದೂರವಾಣಿ ಕರೆಗಳ ವಿವರಗಳು ಬಹಿರಂಗವಾಗಿದ್ದು ಆತನಿಗೆ ದಾವೂದ್ ಇಬ್ರಾಹಿಂ ಜೊತೆ ನಂಟಿ ಇರುವ ಬಗ್ಗೆ ಸಾಕ್ಷ್ಯ ಒದಗಿಸಿವೆ.

SCROLL FOR NEXT