ನವದೆಹಲಿ: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಸಾರ್ವಜನಿಕರಿಗೆ ಆನ್ ಲೈನ್ ಮೂಲಕ ಸುಲಭವಾಗಿ ಹೊಸ ಎಲ್‍ಪಿಜಿ ಸೌಲಭ್ಯ ಒದಗಿಸುವ ಸಹಜ್(ಎಸ್‍ಎಎಚ್ಎಜೆ) ಸೇವೆಗೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಚಾಲನೆ ನೀಡಿದೆ.
ಒಟ್ಟು 13 ನಗರಗಳಲ್ಲಿ ಅನುಷ್ಠಾನಕ್ಕೆ ಬರಲಿರುವ ಈ ಯೋಜನೆಗೆ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ ನೀಡಿದರು. ಈ ಸೌಲಭ್ಯವು ಎಲ್ಲ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ಸರ್ಕಾರದ ಎಲ್‍ಪಿಜಿ ಪೋರ್ಟಲ್ ಪಹಲ್‍ನಲ್ಲಿ ಲಭ್ಯವಿದೆ.