ದೇಶ

ಪೆಟ್ರೋಲ್, ಡೀಸೆಲ್ ದರ ಇಳಿಕೆ

Srinivas Rao BV

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿದ್ದು ಪರಿಷ್ಕೃತ ದರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.

ಪ್ರತಿ ಲಿಟರ್ ಪೆಟ್ರೋಲ್ ದರ 2 ರೂಪಾಯಿ ಇಳಿಕೆಯಾಗಿದ್ದರೆ ಡೀಸೆಲ್  ದರ 50 ಪೈಸೆ ಇಳಿಕೆಯಾಗಿದೆ. ಈ ತಿಂಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್- ಡೀಸೆಲ್ ದರ ಇಳಿಕೆಯಾಗಿದೆ. ಇದಕ್ಕೂ ಮುನ್ನ ಆ.1 ರಂದು ಪೆಟ್ರೋಲ್, ಡಿಸೇಲ್ ದರ ಅನುಕ್ರಮವಾಗಿ ರೂ.1 .27 ಹಾಗೂ ರೂ.1.17 ಇಳಿಕೆಯಾಗಿತ್ತು.  

ದೆಹಲಿಯಲ್ಲಿ ಪೆಟ್ರೋಲ್ ದರ 63 .20  ಹಾಗೂ ಡೀಸೆಲ್ ದರ 44 .95 ರೂಪಾಯಿಯಾಗಿದೆ. ಕಳೆದ ಬಾರಿ ದರ ಇಳಿಕೆಯಾದಾಗಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಡಿಮೆಯಾಗಿದೆ.

SCROLL FOR NEXT