ನವದೆಹಲಿ: ಗುದ್ದೋಡು ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾ ನ್ ಖಾನ್ ಗೆ ಜಾಮೀನು ನೀಡಿರುವುದನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರಿದ್ದ ಪೀಠ, ಮುಂಬೈ ಪೊಲೀಸರಿಗೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ. ಮುಂಬೈನ ಸೆಷನ್ಸ್ ನ್ಯಾಯಾಲಯ ಸಲ್ಮಾನ್ ಖಾನ್ ನನ್ನು ದೋಷಿ ಎಂದು ಕಳೆದ ಮೇ 6ರಂದು ತೀರ್ಪು ನೀಡಿದ ದಿನವೇ ಮುಂಬೈ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
2002ರ ಸೆಪ್ಟೆಂಬರ್ 28ರ ಗುದ್ದೋಡು ಪ್ರಕರಣ, ''ಖಂಡನೀಯ ನರಹತ್ಯೆಯಾಗಿದೆ ಎಂದು ತೀರ್ಪು ನೀಡಿದ್ದ ಸೆಷನ್ಸ್ ಕೋರ್ಟ್ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಅದನ್ನು ಹೈಕೋರ್ಟ್ ವಜಾ ಮಾಡಿತ್ತು. ಸಲ್ಮಾನ್ ಖಾನ್ ಚಲಾಯಿಸುತ್ತಿದ್ದ ಕಾರು ಫುಟ್ ಪಾತ್ ಮೇಲೆ ಚಲಿಸಿ ಒಬ್ಬ ಸಾವನ್ನಪ್ಪಿ ಇತರ ನಾಲ್ವರು ಗಾಯಗೊಂಡಿದ್ದರು.