ಗ್ಯಾಸ್ 
ದೇಶ

ಸಬ್ಸಿಡಿ ರಹಿತ ಅನಿಲ ಬೆಲೆ ಏರಿಕೆ

ಸೋಮವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸಿದ್ದ ತೈಲ ಕಂಪನಿಗಳು ಮಂಗಳವಾರ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಸಿವೆ...

ನವದೆಹಲಿ: ಸೋಮವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸಿದ್ದ ತೈಲ ಕಂಪನಿಗಳು ಮಂಗಳವಾರ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಸಿವೆ. ಇದರಿಂದ ಗೃಹ ಬಳಕೆಯ ಅಡುಗೆ ಅನಿಲ ಪ್ರತಿ ಸಿಲಿಂಡರ್‍ ಗೆ ರು. 61.50ರಷ್ಟು ತುಟ್ಟಿಯಾಗಲಿದೆ. 
ದೆಹಲಿ ದರದಲ್ಲಿ 14.2 ಕೆಜಿ ವಿಭಾಗದ ಪ್ರತಿ ಅಡುಗೆ ಅನಿಲ ಸಿಲಿಂಡರ್ ಬೆಲೆ ರು. 606.50 ಆಗಲಿದೆ. ಸಬ್ಸಿಡಿ ಸಿಲಿಂಡರ್ ಬೆಲೆ ರು. 417.82 ಆಗಲಿದೆ. ಇತ್ತ ಬೆಂಗಳೂರಿನಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ದರ ರು. 621.50 ಆಗಲಿದೆ. 
ಪೆಟ್ರೋಲ್, ಡೀಸೆಲ್ ನಂತೆ ವಿಮಾನದಲ್ಲಿ ಬಳಸುವ ತೈಲದ ಬೆಲೆಯನ್ನೂ ಇಳಿಸಲಾಗಿದೆ. ಎಟಿಎಫ್ ಬೆಲೆ ಶೇ. 1.2ರಷ್ಟು ಇಳಿಕೆ ಕಂಡಿದ್ದರೂ ವಿಮಾನ ನಿಲ್ದಾಣಗಳಿಂದ ವಿಮಾನ ನಿಲ್ದಾಣಕ್ಕೆ ಈ ದರ ಏರಿಳಿಯಲಿದೆ. ವಿಮಾನಗಳ ಒಟ್ಟು ಹಾರಾಟ ವೆಚ್ಚದ ಶೇ. 40ರಷ್ಟು ಇಂಧನಕ್ಕೇ ವ್ಯಯವಾಗುವ ಹಿನ್ನೆಲೆಯಲ್ಲಿ, ಬೆಲೆ ಇಳಿಕೆ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಉಲ್ಲಾಸ ತಂದಿದೆ. 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಬೆಲೆ ಆಧರಿಸಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳೂ ಅಡುಗೆ ಅನಿಲ ಮತ್ತು ವಿಮಾನ ಇಂಧನ ಬೆಲೆಯನ್ನು ನಿಗದಿಪಡಿಸುತ್ತವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT