ದೇಶ

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಗ್ರಾಮೀಣ ಪ್ರದೇಶದಲ್ಲಿ 'ಕೈ' ಮೇಲುಗೈ

Lingaraj Badiger

ಅಹಮದಾಬಾದ್: ಗುಜರಾತ್ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಎಲ್ಲಾ ಆರು ಮಹಾನಗರ ಪಾಲಿಕೆಯ ಗುದ್ದುಗೆಯನ್ನು ಬಿಜೆಪಿ ಉಳಿಸಿಕೊಂಡಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಚೇತರಿಸಿಕೊಂಡಿರುವ ಕಾಂಗ್ರೆಸ್ 31 ಜಿಲ್ಲಾ ಪಂಚಾಯತ್‌ಗಳ ಪೈಕಿ 18ರಲ್ಲಿ ಮುನ್ನಡೆ ಸಾಧಿಸಿದೆ.

230 ತಾಲೂಕ ಪಂಚಾಯ್ತಿಯ ಒಟ್ಟು 4778 ಸ್ಥಾನಗಳ ಪೈಕಿ ಕಾಂಗ್ರೆಸ್ 2204 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತರೂಢ ಬಿಜೆಪಿ 1798 ಸ್ಥಾನಗಳನ್ನು ಕಾಯ್ದುಕೊಂಡಿದೆ.

ಅಹಮದಾಬಾದ್, ಸುರತ್, ರಾಜ್ ಕೋಟ್, ವೊಡೊದರಾ, ಜಾಮನಗರ ಹಾಗೂ ಭಾವನಗರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಪಟೇಲ್ ಮೀಸಲಾತಿ ಹೋರಾಟದ ಬಳಿಕ ಸ್ಥಳೀಯ ಸಂಸ್ಥೆ ಹಾಗೂ ನಗರಸಭೆ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿತ್ತು. ಅಲ್ಲದೆ ಅನಂದಿಬೇನ್ ಪಟೇಲ್ ಅವರು ಮುಖ್ಯಮಂತ್ರಿಯಾದ ನಂತರ ಎದುರಿಸಿದ ಮೊದಲ ಚುನಾವಣೆ ಇದಾಗಿದೆ.

SCROLL FOR NEXT