ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ, ಅಪ್ರಾಪ್ತ ಬಾಲಕ (ಸಂಗ್ರಹ ಚಿತ್ರ) 
ದೇಶ

2012 ದೆಹಲಿ ಗ್ಯಾಂಗ್ ರೇಪ್ : ಡಿ.22ರಂದು ಅಪ್ರಾಪ್ತ ಅಪರಾಧಿಯನ್ನು ಬಂಧಮುಕ್ತ ಗೊಳಿಸುವುದಿಲ್ಲ

2012 ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ, ಅಪ್ರಾಪ್ತ ಬಾಲಕನ್ನು ಡಿ. 22ರಂದು ಬಂಧಮುಕ್ತ...

ನವದೆಹಲಿ: 2012 ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ, ಅಪ್ರಾಪ್ತ ಬಾಲಕನ್ನು ಡಿ. 22ರಂದು ಬಂಧಮುಕ್ತಗೊಳಿಸಲಾಗುವುದಿಲ್ಲ ಎಂದು ಬಲ್ಲ ಮೂಲಗಳು ಹೇಳಿವೆ. ಡಿ. 22ರಂದು ಅತ್ಯಾಚಾರಿಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದ ಮೂಲಗಳು ಆ ದಿನ ಆತನನ್ನು ಸ್ಪೆಷಲ್ ಹೋಂಗೆ ಕಳುಹಿಸಲಾಗುವುದು ಎಂದು ಹೇಳಿವೆ. 
ನಿರ್ಭಯಾ ಅತ್ಯಾಚಾರದ ಅಪರಾಧಿಗೆ ಈಗ 21 ವರುಷವಾಗಿದ್ದು, ಒಂದು ವರ್ಷಗಳ ಕಾಲ ಆತನನ್ನು ಎನ್ಜಿಒ ಒಂದರಲ್ಲಿ ಇರಿಸಲಾಗುವುದು.  ಆದಾಗ್ಯೂ, ಅಪರಾಧಿಯನ್ನು ಬಿಡುಗಡೆಗೊಳಿಸುವ ಬದಲು ಒಂದು ವರ್ಷ ಎನ್ಜಿಒದಲ್ಲಿ ಇರಿಸುವುದರ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ, ನನ್ನ ಮಗಳಿಗೆ ನ್ಯಾಯ ಸಿಗಲಿಲ್ಲ ಎಂಬುದು ಅತೀವ ದುಃಖಕ್ಕೀಡು ಮಾಡುತ್ತದೆ ಎಂದು ನಿರ್ಭಯಾಳ ಅಮ್ಮ ಆಶಾ ದೇವಿ ಹೇಳಿದ್ದಾರೆ.
ನನ್ನ ಮಗಳನ್ನು ಅತ್ಯಾಚಾರಗೈದು ಕೊಲೆಗೈದ ಸಮಯದಲ್ಲೇ ಅತ್ಯಾಚಾರಿಗಳನ್ನು ಬಂಧಮುಕ್ತಗೊಳಿಸುತ್ತಿರುವ ಸುದ್ದಿ ಕೇಳಿ ಬೇಸರವಾಗಿತ್ತು. ನನ್ನ ಮಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಹೊಣೆ ಎಂದು ಆಶಾ ದೇವಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!