ಧಾರಾವಾಹಿ ಅನುಕರಿಸಲು ಹೋದ ಬಾಲಕಿ ಸಾವು (ಸಾಂದರ್ಭಿಕ ಚಿತ್ರ) 
ದೇಶ

ಧಾರಾವಾಹಿ ಅನುಕರಿಸಲು ಹೋದ ಬಾಲಕಿ ಸಾವು

ಮಹಿಳೆಯರೇ ಮಕ್ಕಳ ಮುಂದೆ ಧಾರಾವಾಹಿ ನೋಡುವುದಕ್ಕೂ ಮುನ್ನ ಎಚ್ಚರಿಕೆ ವಹಿಸಿ. ಪ್ರತಿನಿತ್ಯ ಧಾರಾವಾಹಿ ನೋಡುವುದರ ಪರಿಣಾಮ ನಿಮ್ಮ ಮಕ್ಕಳ ಮೇಲೆ ಬೀರಬಹುದು...

ಬುರ್ದ್ವಾನ್: ಮಹಿಳೆಯರೇ ಮಕ್ಕಳ ಮುಂದೆ ಧಾರಾವಾಹಿ ನೋಡುವುದಕ್ಕೂ ಮುನ್ನ ಎಚ್ಚರಿಕೆ ವಹಿಸಿ. ಪ್ರತಿನಿತ್ಯ ಧಾರಾವಾಹಿ ನೋಡುವುದರ ಪರಿಣಾಮ ನಿಮ್ಮ ಮಕ್ಕಳ ಮೇಲೆ ಬೀರಬಹುದು.

ಧಾರಾವಾಹಿಯ ದೃಶ್ಯವೊಂದನ್ನು ನೋಡಿ ಅದನ್ನು ಅನುಕರಣೆ ಮಾಡಲು ಹೋದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆಯೊಂದು ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಮೂರನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಸಂಗೀತ ಮಾಂಜಿ (7)ನಿನ್ನೆಯಷ್ಟೇ ಪಕ್ಕದ ಮನೆಯಲ್ಲಿ ಬರುತ್ತಿದ್ದ ಟಿವಿ ಧಾರಾವಾಹಿಯೊಂದನ್ನು ನೋಡಿ ಮನೆಗೆ ಬಂದಿದ್ದಾಳೆ. ಬಾಲಕಿ ಮನೆಗೆ ಬಂದ ಸಮಯದಲ್ಲಿ ಮನೆಯಲ್ಲಿ ಬಾಲಕಿಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಈ ವೇಳೆ ಧಾರಾವಾಹಿಯಲ್ಲಿ ಬಂದ ನೇಣು ಹಾಕಿಕೊಳ್ಳುವ ದೃಶ್ಯವೊಂದನ್ನು ಬಾಲಕಿ ಅನುಕರಣೆ ಮಾಡಿದ್ದಾಳೆ. ಕಿಟಕಿಯ ಕಂಬಿಗಳಿಗೆ ಬಟ್ಟೆಯೊಂದನ್ನು ಕಟ್ಟಿದ ಬಾಲಕಿ ಧಾರಾವಾಹಿ ದೃಶ್ಯವನ್ನು ಅನುಕರಣೆ ಮಾಡಿದ್ದಾಳೆ. ಇದರ ಪರಿಣಾಮ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ಬಾಲಕಿಯ ತಂದೆ-ತಾಯಿ ಕೆಲಸಕ್ಕೆ ಹೋಗುತ್ತಿದ್ದರಿಂದ ಬಾಲಕಿಯನ್ನು ಆಕೆಯ ಅಜ್ಜ-ಅಜ್ಜಿ ನೋಡುಕೊಳ್ಳುತ್ತಿದ್ದರು. ಬಾಲಕಿ ಅನುಕರಣೆ ಮಾಡುವ ದಿನ ಆಕೆಯನ್ನು ನೋಡುಕೊಳ್ಳುತ್ತಿದ್ದ ಅಜ್ಜ-ಅಜ್ಜಿ ಯಾವುದೋ ಕೆಲಸಕ್ಕೆಂದು ಹೊರಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಪಕ್ಕದ ಮನೆಯಲ್ಲಿ ಬರುತ್ತಿದ್ದ ಧಾರಾವಾಹಿಯನ್ನು ನೋಡಿ ಬಹಳ ಉತ್ಸುಕಳಾಗಿ ಬಂದ ಬಾಲಕಿ ದೃಶ್ಯವನ್ನು ಅನುಕರಿಸಿ ಸಾವನ್ನಪ್ಪಿದ್ದಾಳೆಂದು ನೆರೆಮನೆಯವರು ಹೇಳಿದ್ದಾಳೆ.

ಕೆಲಸ ಮುಗಿಸಿ ಬಂದ ಅಜ್ಜ-ಅಜ್ಜಿ ಬಾಲಕಿಯಿದ್ದ ಸ್ಥಿತಿ ಕಂಡು ಗಾಬರಿಗೊಂಡಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಬಾಲಕಿ ಸಾವನ್ನಪ್ಪಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.

ಸಂಗೀತಾಗೆ ಧಾರಾವಾಹಿ ನೋಡುವ ಹುಚ್ಚು ಇತ್ತು. ಟಿ.ವಿಯಲ್ಲಿ ಬರುವ ಯಾವುದೇ ದೃಶ್ಯವನ್ನು ನೋಡಿದರೂ ಅದನ್ನು ಅನುಕರಿಸುತ್ತಿದ್ದಳೆಂದು ಬಾಲಕಿಯ ತಾತ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel