ನವದೆಹಲಿ: ದೆಹಲಿ ಬೀದಿ ದೀಪಗಳಿಗೆ ಎಲ್ಇಡಿ ಬಲ್ಬ್ ಗಳನ್ನು ಅಳವಡಿಸುವುದಾಗಿ ದೆಹಲಿ ಇಂಧನ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಎಲ್ಇಡಿ ಎಕ್ಸ್ಪೋದಲ್ಲಿ ಭಾಗವಹಿಸಿ ಮಾತನಾಡಿದ ಸತ್ಯೇಂದ್ರ ಜೈನ್, ದೆಹಲಿ ಲೋಕೋಪಯೋಗಿ ಇಲಾಖೆ ಶೀಘ್ರವೇ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಿದೆ. ಈಗಿರುವ ಬೀದಿ ದೀಪಗಳಿಗೂ ಎಲ್ಇಡಿ ಬಲ್ಬ್ ಗಳನ್ನು ಅಳವಡಿಕೆ ಮಾಡಲಿದೆ ಆದರೆ ಅದಕ್ಕೆ ಸ್ವಲ್ಪ ಸಮಯಾವಕಾಶ ಬೇಕು ಎಂದು ಹೇಳಿದ್ದಾರೆ.
ಡಿಸೆಂಬರ್ 5 ವರೆಗೆ ದೆಹಲಿಯಲ್ಲಿ ಎಲ್ಇಡಿ ಎಕ್ಸ್ಪೋ ನಡೆಯಲಿದ್ದು 260 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಈ ಪೈಕಿ ಭಾರತದ 100 ಕಂಪನಿಗಳಿದ್ದರೆ ಚೀನಾದ 70 ಸಂಸ್ಥೆಗಳು ಭಾಗವಹಿಸಿವೆ. ಯುಎಇ, ಸಿಂಗಪುರ, ಫಿನ್ ಲ್ಯಾಂಡ್, ಹಾಂಕ್ ಕಾಂಗ್ ಕಂಪನಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ.