ಪಾಟ್ನಾ: ತಮಿಳುನಾಡಿನ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕಾಗಿ ಬಿಹಾರ ಸಿಎಂ ನಿತೀಶ್‍ಕುಮಾರ್ ರು.5 ಕೋಟಿ ನೆರವು ನೀಡಿದ್ದಾರೆ.
ಈ ನೋವಿನ ಸಮಯದಲ್ಲಿ ಬಿಹಾರದ ಜನತೆಯೂ ನಿಮ್ಮ ಜತೆಗಿದ್ದಾರೆ ಎಂದಿರುವ ನಿತೀಶ್, ತಮಿಳುನಾಡು ಸಿಎಂ ಜಯಲಲಿತಾರಿಗೆ ಚೆಕ್ ಹಸ್ತಾಂತರಿಸಿದ್ದಾರೆ.
ಇದೇ ವೇಳೆ, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೂ ತಮಿಳುನಾಡಿನ ಜನರ ನೆರವಿಗೆ ಧಾವಿಸಿದ್ದು, ತನ್ನ ಮೊದಲ ತಿಂಗಳ ವೇತನವನ್ನು ನೀಡುವುದಾಗಿ ಘೋಷಿಸಿದ್ದಾರೆ.