ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಬಾಹುಬಲಿಯ ರಾಣಿ ಸಿವಗಾಮಿಯಂತೆ ಚಿತ್ರಿಸಿರುವ ಪೋಸ್ಟರ್ ಎಲ್ಲೆಡೆ ಹಾಕಲಾಗಿದೆ,
ಪ್ರವಾಹದಿಂದ ತತ್ತರಿಸಿರುವ ಚೆನ್ನೈ ನಗರವನ್ನು ಜಯಲಲಿತಾ, ತಾನೂ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರೂ ರಾಜ ವಂಶದ ಕುಡಿ ಬಾಹುಬಲಿಯನ್ನು ತನ್ನ ಕೈಯ್ಯಿಂದ ಎತ್ತಿ ಹಿಡಿದು ಕಾಪಾಡಿದಂತೆ, ಚೆನ್ನೈ ಪ್ರವಾಹದ ವಿರುದ್ಧ ಜಯಲಲಿತಾ ಹೋರಾಡುತ್ತಿದ್ದಾರೆ ಎನ್ನುವಂತ ಪೋಸ್ಟರ್ ಗಳನ್ನು ಡಿಎಂಕೆ ನಾಯಕರು ಎಲ್ಲೆಲ್ಲೂ ಹಾಕಿ, ಅಮ್ಮನ ಮೇಲಿನ ಅಭಿಮಾನವನ್ನು ತೋರ್ಪಡಿಸುತ್ತಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ಈ ದೃಶ್ಯ ನೋಡಲು ಸುಂದರವಾಗಿದೆ, ಆದರೆ ಪೋಸ್ಟರ್ ನಲ್ಲಿ ಜಯಲಲಿತಾ ಅವರನ್ನು ಈ ರೀತಿ ಚಿತ್ರಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.