ರೈತರ ಪರಿಹಾರಕ್ಕೆ ರು.20 ಸಾವಿರ ದೇಣಿಗೆ ನೀಡಿದ ವಡಾ ಪಾವ್ ಮಾರಾಟಗಾರ
ಮಹಾರಾಷ್ಟ್ರದ ಬರ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ವಡಾ ಪಾವ್ ಮಾರಾಟಗಾರರೊಬ್ಬರು ಮುಖ್ಯಮಂತ್ರಿಗಳ ಪರಿಹಾರ....
ಮುಂಬೈ: ಮಹಾರಾಷ್ಟ್ರದ ಬರ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ವಡಾ ಪಾವ್ ಮಾರಾಟಗಾರರೊಬ್ಬರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 20 ಸಾವಿರ ರುಪಾಯಿ ದೇಣಿಗೆ ನೀಡಿದ್ದಾರೆ.
20 ಸಾವಿರ ರುಪಾಯಿ ದೇಣಿಗೆ ನೀಡಿದ ಮಂಗೇಶ್ ಅಹಿವಾಲೆ ಅವರ ಮಾನವೀಯತೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಡಿ ಹೊಗಳಿದ್ದಾರೆ.
'ಮಾನವೀಯತೆಗೆ ಇದೊಂದು ಅತ್ಯುತ್ತಮ ಉದಾಹರಣೆ. ವಡಾ ಪಾವ್ ಮಾರಾಟಗಾರ ಮಂಗೇಶ್ ನನ್ನನ್ನು ಭೇಟಿ ಮಾಡಿ, ಸಿಎಂ ಪರಿಹಾರ ನಿಧಿಗೆ 20 ಸಾವಿರ ರುಪಾಯಿ ದೇಣಿಗೆ ನೀಡಿದ್ದಾರೆ' ಎಂದು ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.
'ಅಕ್ಟೋಬರ್ 11ರಂದು, ಅಂದಿನಿಂದ ವಡಾ ಪಾವ್ ಮಾರಾಟದಿಂದ ಬರುವ ಲಾಭವನ್ನು ಬರ ಪೀಡಿತ ಪ್ರದೇಶದ ರೈತರ ಪರಿಹಾರ ನೀಡುವುದಾಗಿ' ಮಂಗೇಶ್ ಘೋಷಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.