ಇಕ್ಲಾಖ್(ಒಳಚಿತ್ರ) ಹಾಗೂ ಕುಟುಂಬ 
ದೇಶ

ದಾದ್ರಿ ಹತ್ಯೆ: ಗೋಮೂತ್ರ, ಗಂಗಾಜಲದಿಂದ ಇಕ್ಲಾಖ್ ಗ್ರಾಮ ಶುದ್ಧೀಕರಣ!

ಗೋಮಾಂಸ ಸೇವಿಸಿದ ಆರೋಪದ ಮೇಲೆ ಕೊಲ್ಲಲ್ಪಟ್ಟ ಉತ್ತರ ಪ್ರದೇಶದ ದಾದ್ರಿಯ ಮೊಹಮ್ಮದ್‌ ಇಕ್ಲಾಖ್ ಅವರ ಬಿಶಾಡಾ ಗ್ರಾಮವನ್ನು...

ನೋಯ್ಡಾ: ಗೋಮಾಂಸ ಸೇವಿಸಿದ ಆರೋಪದ ಮೇಲೆ ಕೊಲ್ಲಲ್ಪಟ್ಟ ಉತ್ತರ ಪ್ರದೇಶದ ದಾದ್ರಿಯ ಮೊಹಮ್ಮದ್‌ ಇಕ್ಲಾಖ್ ಅವರ ಬಿಶಾಡಾ ಗ್ರಾಮವನ್ನು ಈಗ ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಿಸಲಾಗಿದೆ.

ನ್ಯೂಸ್‌ 18 ಸುದ್ದಿ ವಾಹಿನಿಯ ವರದಿಯ ಪ್ರಕಾರ, ಸೋಮವಾರ ಇಕ್ಲಾಖ್ ಅವರ ಬಿಶಾಡಾ ಗ್ರಾಮವನ್ನು ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಿಸಲಾಗಿದೆ.

ದಾದ್ರಿಯ ಬಿಶಾಡಾ ಗ್ರಾಮದಲ್ಲಿ ನಡೆದುಹೋಗಿರುವ ದುರದೃಷ್ಟಕರ ಘಟನೆಯಿಂದಾಗಿ ಗ್ರಾಮದ ಇಡೀ ಪರಿಸರವೇ ಅಶುದ್ಧವಾಗಿದೆ. ಆದುದರಿಂದ ಗ್ರಾಮವನ್ನು ಗೋಮೂತ್ರ ಮತ್ತು ಗಂಗಾಜಲದಿಂದ ಶಾಸ್ತ್ರೋಕ್ತವಾಗಿ ಶುದ್ಧೀಕರಿಸುವುದು ಈಗ ಅಗತ್ಯವಾಗಿದೆ ಎಂದು ಬಿಶಾಡಾ ಗ್ರಾಮದ ದೇವಸ್ಥಾನದ ಅರ್ಚಕ ಸಾಧ್ವಿ ಹರ ಸಿದ್ಧಿ ಗಿರಿ ಅವರು ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿ ಮಾಡಲಾಗಿದೆ.

ಮೊಹಮ್ಮದ್‌ ಅಖಲಾಕ್‌ ಅವರ ಗುರಿ ಇರಿಸುವಂತೆ ಯಾವ ದೇವಾಲಯದಿಂದ ಮೈಕ್‌ ಮೂಲಕ ಘೋಷಣೆ ಹೊರಡಿಸಲಾಗಿತ್ತೋ ಆ ದೇವಾಲಯವನ್ನು ಕೂಡ ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಿಸಲಾಗುವುದು ಎಂದು ಸಾಧ್ವಿ ಗಿರಿ ಅವರು ಹೇಳಿದ್ದಾರೆ.

ಈ ಶುದ್ಧೀಕರಣ ಪ್ರಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನಡೆಸುವ ಸಲುವಾಗಿ ವಾರಾಣಸಿಯ ಪವಿತ್ರ ಘಾಟ್‌ಗಳಿಂದ ಗಂಗಾಜಲ ಸಹಿತವಾಗಿ ವಾರಾಣಸಿಯ ಅರ್ಚಕರೊಬ್ಬರು ಇಲ್ಲಿಗೆ ಬಂದು ಶುದ್ಧೀಕರಣ ಪ್ರಕ್ರಿಯೆಯನ್ನು ವಿಧ್ಯುಕ್ತವಾಗಿ ನಡೆಸಿಕೊಡಲಿದ್ದಾರೆ ಎಂದು ಸಾಧ್ವಿ ಗಿರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT