ಮುಂಬೈ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರ ರೆಸ್ಟೋರೆಂಟ್‌ನ್ನು ಹರಾಜು ಮೂಲಕ ಮಾಜಿ ಪತ್ರಕರ್ತ ಎಸ್ ಬಾಲಕೃಷ್ಣನ್ ಖರೀದಿಸಿದ್ದಾರೆ. ಮುಂಬೈ ಪಾಕ್‌ಮೋಡಿಯಾ ರಸ್ತೆಯಲ್ಲಿರುವ ದೆಹಲಿ ಜೈಕ್ ಎಂಬ ರೆಸ್ಟೋರೆಂಟ್‌ನ್ನು ಬಾಲಕೃಷ್ಣ ಅವರು ತಮ್ಮದಾಗಿಸಿಕೊಂಡಿದ್ದಾರೆ. ಮಹರಾಷ್ಟ್ರ ಸರ್ಕಾರ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ರು. 4.8 ಕೋಟಿಗೆ ಬಾಲಕೃಷ್ಣನ್ ಅವರು ದೆಹಲಿ ಜೆಕ್‌ನ್ನು ಖರೀದಿಸಿದ್ದಾರೆ.ಕೊಲಂಬಿಯಾದ ಹೋಟೆಲ್ ಡಿಪ್ಲೋಮ್ಯಾಟ್ ನಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು.
ಬಾಲಕೃಷ್ಣನ್ ಅವರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಎಂಬುದು ಸುದ್ದಿಯಾದೊಡನೆ ಚೋಟಾ ಶಕೀಲ್‌ನಿಂದ ಬಾಲಕೃಷ್ಣನ್‌ಗೆ ಬೆದರಿಕೆ ಬಂದಿತ್ತು. ದೇಶಸೇವಾ ಸಮಿತಿ ಎಂಬ ಎನ್‌ಜಿಒ ಪರವಾಗಿ ತಾನು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ.