ನವದೆಹಲಿ: ಸಿಪಿಐ (ಎಂ) ಹಿರಿಯ ನೇತಾರ ಎಬಿ ಬರ್ದನ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ವೆಂಟಿಲೇಟರ್‌ನ ಸಹಾಯದಿಂದ ಬರ್ದನ್ ಈಗ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿ ಮುಂದುವರಿದಿದೆ ಎಂದು ಪಕ್ಷದ ನೇತಾರರು ಹೇಳಿದ್ದಾರೆ.
ಅದೇ ವೇಳೆ ಬರ್ದನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಎಡವಟ್ಟು ಗಮನಿಸಿದ ಮಮತಾ, ಈ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ.