ದೇಶ

ನ್ಯಾಷನಲ್ ಹೆರಾಲ್ಡ್ ಪ್ರಕರಣ, ಪ್ರಧಾನಿ ಕಚೇರಿಯಿಂದಲೇ ಪಿತೂರಿ: ರಾಹುಲ್

Lingaraj Badiger

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಒಂದು ರಾಜಕೀಯ ಪಿತೂರಿ ಎಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇದು ಬಿಜೆಪಿ ರಾಜಕೀಯ ಮಾಡುತ್ತಿರುವ ರೀತಿ ಎಂದು ಬುಧವಾರ ಹೇಳಿದ್ದಾರೆ.

ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಶೇ.100ರಷ್ಟು ಪ್ರಧಾನಿ ಕಚೇರಿಯಿಂದ ನಡೆಯುತ್ತಿರುವ ರಾಜಕೀಯ ಪಿತೂರಿ ಎಂದು ಆರೋಪಿಸಿದ್ದಾರೆ.

ಇನ್ನು ಕಾಂಗ್ರೆಸ್ ಸಂಸತ್‌ನ್ನು ಬಳಸಿಕೊಂಡು ನ್ಯಾಯಾಂಗಕ್ಕೆ ಬೆದರಿಕೆಯಾಕುವ ಯತ್ನ ಮಾಡುತ್ತಿದೆ ಎಂಬ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್, 'ಅದು ಬಿಜೆಪಿಯ ಮತ್ತೊಂದು ದಾರಿ ಅಷ್ಟೇ. ಆದರೆ ಯಾರೂ ನ್ಯಾಯಾಂಗಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು' ಎಂದರು.

ಇದೇ ವೇಳೆ, ನನಗೆ ನ್ಯಾಯಾಂಗದ ಮೇಲೆ  ಸಂಪೂರ್ಣ ವಿಶ್ವಾಸವಿದೆ. ಸತ್ಯ ಹೊರ ಬರಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಹೇಳಿದರು.

SCROLL FOR NEXT