ದೇಶ

ಲೈಂಗಿಕ ಕಿರುಕುಳ ಮಾಹಿತಿಗೆ ನಕಾರ

Mainashree
ನವದೆಹಲಿ: ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳನ್ನು ಬಹಿರಂಗ ಪಡಿಸುವುದನ್ನು ಕಂಪನಿಗಳಿಗೆ ಕಡ್ಡಾಯಪಡಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮಾಡಿದ ಪ್ರಸ್ತಾಪಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ನಕಾರ ಸೂಚಿಸಿದ್ದಾರೆ. 
ಕಂಪನಿಗಳು ತಮ್ಮ ವಾರ್ಷಿಕ ವರದಿಯಲ್ಲಿ, ಇಂಥ ದೂರುಗಳ ವಿವರ ಪ್ರಕಟಿಸಬೇಕು, ಕಂಪನಿ ಕಡ್ಡಾಯವಾಗಿ ರಚಿಸಬೇಕಿರುವ ಆಂತರಿಕ ದೂರುಗಳ ಸಮಿತಿ ಹಾಗೂ ಲೈಂಗಿಕ ಕಿರುಕುಳ ತಡೆ ಸಮಿತಿ ಕೂಡ ತನ್ನ ವಾರ್ಷಿಕ ವರದಿಯಲ್ಲಿ ಈ ಎಲ್ಲ ವಿವರಗಳನ್ನು ನೀಡುವಂತೆ ಆದೇಶಿಸಬೇಕೆಂದು ಸಚಿವೆ ಮೇನಕಾ ಗಾಂಧಿ ಪ್ರಸ್ತಾಪ ಸಲ್ಲಿಸಿದ್ದರು. 
ಆದರೆ, ಕಂಪನಿಗಳ ಕಾಯಿದೆ 2013ರ ಪ್ರಕಾರ ಇಂಥ ಮಾಹಿತಿ ಬಹಿರಂಗಕ್ಕೆ ಕಂಪನಿಗಳ ಪ್ರತಿನಿಧಿಗಳು ವಿರುದ್ಧವಾಗಿದ್ದಾರೆ. ಅಲ್ಲದೇ, ಈ ರೀತಿ ಒತ್ತಡ ಹೇರುವುದು ಉತ್ತಮ ಕ್ರಮವಲ್ಲ ಎಂದು ಉತ್ತರಿಸುವ ಮೂಲಕ ಸಚಿವ ಜೇಟ್ಲಿ ಅಸಮ್ಮತಿ ಸೂಚಿಸಿದ್ದಾರೆ.
SCROLL FOR NEXT