ದೇಶ

ಸಮ-ಬೆಸ ಸಂಖ್ಯೆ ಸಂಚಾರ ನಿಯಮ: ಜ.1 ರಿಂದ ದೆಹಲಿಯಲ್ಲಿ 6 ,000 ಹೆಚ್ಚುವರಿ ಬಸ್ ಕಾರ್ಯನಿರ್ವಹಣೆ

Srinivas Rao BV

ನವದೆಹಲಿ: ಜ.1 ರಿಂದ ದೆಹಲಿಯಲ್ಲಿ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ 6 ,000 ಹೆಚ್ಚುವರಿ ಸಾರಿಗೆ ಬಸ್ ಗಳನ್ನು ನಿಯೋಜಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಜ.1 ರಿಂದ 15 ರವರೆಗೆ ದೆಹಲಿಯಲ್ಲಿ 6 ,000 ಹೆಚ್ಚುವರಿ ಬಸ್ ಗಳು ಸಂಚರಿಸಲಿದೆ ಎಂದು ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ಮಾಹಿತಿ ನೀಡಿದ್ದಾರೆ. 2 ,000 ಕ್ಕೂ ಅಧಿಕ ಸಿಎನ್ ಜಿಸಿ ಶಾಲಾ ಬಸ್ ಗಳಲ್ಲಿ ಶೇ.50 ರಷ್ಟು ಸೀಟ್ ಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗುತ್ತದೆ. ಇದಕ್ಕಾಗಿ ಪುಚ್ಹೋ ಆಪ್ ಗಳನ್ನು ಬಿಡುಗಡೆ ಮಾಡಲಾಗುವುದು ಹಾಗೂ ಡಿಸೆಂಬರ್ 25 ರಿಂದ ಆಪ್ ಗಳನ್ನು ಜನರು ಡೌನ್ ಲೋಡ್ ಮಾಡಬಹುದು ಎಂದು ಎಂದು ರೈ ತಿಳಿಸಿದ್ದಾರೆ.
ಸಮ- ಬೆಸ ವಾಹನ ಸಂಚಾರ ನಿಯಮ ಜಾರಿಯಾದ ನಂತರ ಒಂದೇ ಆಟೋವನ್ನು ಇಬ್ಬರು ಚಾಲಕರು ನಿರ್ವಹಿಸಬಹುದು ಇದರಿಂದಾಗಿ ಆಟೋಗಳು ಅತಿ ಹೆಚ್ಚು ಕಾಲ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಗೋಪಾಲ್ ರೈ ಅಭಿಪ್ರಾಯಪಟ್ಟಿದ್ದಾರೆ. 
ವಾಯುಮಾಲಿನ್ಯ ತಡೆಗಟ್ಟಲು ಜನವರಿ 1ರಿಂದ ದೆಹಲಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಮ-ಬೆಸ ವಾಹನ ಸಂಚಾರ ನಿಯಮ ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ.

SCROLL FOR NEXT