ಹಾರ್ದಿಕ್ ಪಟೇಲ್ 
ದೇಶ

ದೇಶದ್ರೋಹ ಪ್ರಕರಣ: ಹಾರ್ದಿಕ್‌ ಪಟೇಲ್‌ ಗೆ ಜಾಮೀನು ತಿರಸ್ಕಾರ

ದೇಶ ದ್ರೋಹ ಪ್ರಕರಣದ ಆರೋಪದ ಮೇಲೆ ಜೈಲು ಪಾಲಾಗಿರುವ ಪಟೇಲ್‌ ಸಮುದಾಯದ ಮೀಸಲು ಆಂದೋಲನದ...

ಸೂರತ್‌: ದೇಶ ದ್ರೋಹ ಪ್ರಕರಣದ ಆರೋಪದ ಮೇಲೆ ಜೈಲು ಪಾಲಾಗಿರುವ ಪಟೇಲ್‌ ಸಮುದಾಯದ ಮೀಸಲು ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಸೂರತ್‌ ನ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

22ರ ಹರೆಯದ ಹಾರ್ದಿಕ್ ಪಟೇಲ್ ಅವರ ಜಾಮೀನು ಅರ್ಜಿಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಗೀತಾ ಗೋಪಿ ಅವರು ತಿರಸ್ಕರಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಪೊಲೀಸರನ್ನೇ ಕೊಂದು ಹಾಕಿ ಎಂದು ಕರೆ ನೀಡುವ ಮೂಲಕ ಸರಕಾರದ ವಿರುದ್ಧ ಹಿಂಸಾತ್ಮಕ ದಂಗೆಯನ್ನು ಪ್ರಚೋದಿಸಿದ ಆಪಾದನೆಗೆ ಹಾರ್ದಿಕ್ ಪಟೇಲ್ ಗುರಿಯಾಗಿದ್ದಾರೆ.

ಓಬಿಸಿ ಕೋಟಾದಲ್ಲಿ ಪಟೇಲ್‌ ಸಮುದಾಯಕ್ಕೆ ಮೀಸಲು ಒದಗಿಸುವಂತೆ ಆಗ್ರಹಿಸಿ ಹಾರ್ದಿಕ್‌ ಪಟೇಲ್‌ ಈ ವರ್ಷಾರಂಭದಿಂದ ಗುಜರಾತ್‌ನಲ್ಲಿ ಭಾರೀ ಜನಾಂದೋಲನವನ್ನು ಹುಟ್ಟು ಹಾಕಿದ್ದರು.

ಈಗ ಲಾಜಪುರ ಜೈಲಿನಲ್ಲಿ ಇರುವ ಹಾರ್ದಿಕ್‌ ಪಟೇಲ್‌ ತಮ್ಮನ್ನು ಸುಳ್ಳು ಆರೋಪದ ಮೇಲೆ ಕಾನೂನು ಬಾಹಿರವಾಗಿ ಬಂಧಿಸಿಡಲಾಗಿದೆ ಎಂದು ಆರೋಪಿಸಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!