ಸೈಬರ್ ಸ್ಪೇಸ್ ಗೂಢಚಾರಿಕೆ(ಸಾಂಕೇತಿಕ ಚಿತ್ರ) 
ದೇಶ

ಸೈಬರ್ ಸ್ಪೇಸ್ ನಲ್ಲಿ ಭಾರತದ ಮೇಲೆ ಅಮೆರಿಕ ಗೂಢಚಾರಿಕೆ

ಸೈಬರ್ ಸ್ಪೇಸ್ ನಲ್ಲಿ ಭಾರತ ಹಾಗೂ ಭಾರತ ಸರ್ಕಾರದ ಮೇಲೆ ಗೂಢಚಾರಿಕೆ ನಡೆಸಲು ಅಮೆರಿಕ ತನ್ನ ಅಂಗ ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ.

ನವದೆಹಲಿ: ಸೈಬರ್ ಸ್ಪೇಸ್ ನಲ್ಲಿ ಭಾರತ ಸರ್ಕಾರದ ಮೇಲೆ ಗೂಢಚಾರಿಕೆ ನಡೆಸಲು ಅಮೆರಿಕ ತನ್ನ ಅಂಗ ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ.
ಭಾರತ ಸರ್ಕಾರ ಸೈಬರ್ ದಾಳಿಗೆ ಪ್ರತಿರೋಧವೊಡ್ಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿಕೆ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ. ಸೈಬರ್ ಸ್ಪೇಸ್ ನಲ್ಲಿ ಭಾರತ ಸರ್ಕಾರದ, ಭಾರತೀಯರ, ಭಾರತದ ಅಂಗಸಂಸ್ಥೆಗಳ ಸಂಪರ್ಕ ವ್ಯವಸ್ಥೆಯ ಮೇಲೆ ಗೂಢಚಾರಿಕೆ ನಡೆಸಲು ಅಮೆರಿಕ ತನ್ನ ಅಂಗ ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಬಗ್ಗೆ ಅಮೆರಿಕ ಬಳಿ ಪ್ರಸ್ತಾಪಿಸಲಾಗಿದೆ.
ಗೂಢಚಾರಿಕೆ ನಡೆಸುವವರು ಗುರುತನ್ನು ಮರೆಮಾಚುವುದಕ್ಕಾಗಿ ಮಾಸ್ಕ್ ರೇಡಿಂಗ್ ತಂತ್ರ ಹಾಗೂ ಹಿಡನ್ ಸರ್ವರ್ ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.  ಸೈಬರ್ ದಾಳಿಗಳನ್ನು ಎದುರಿಸುವುದಕ್ಕಾಗಿ ಭಾರತ ಸರ್ಕಾರ ಯೋಜನೆಯೊಂದನ್ನು ರೂಪಿಸಿದ್ದು, ಇದನ್ನು ಕೇಂದ್ರ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗೂ ಅಳವಡಿಸಲಾಗುವುದು ಎಂದು ವಿಕೆ ಸಿಂಗ್ ಹೇಳಿದ್ದಾರೆ.
 ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ, ಸೈಬರ್ ಅಪಾಯಗಳ ಬಗ್ಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿರುತ್ತದೆ. ಸಿಇಆರ್ ಟಿ  ಕಂಪ್ಯೂಟರ್ ವ್ಯವಸ್ಥೆ ನಿರ್ವಹಿಸುವವರಿಗೆ ನಿಯತವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ ಎಂದು ವಿಕೆ ಸಿಂಗ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT