ಸೋನಿಯಾ ಗಾಂಧಿ ಮತ್ತಿತರರು... 
ದೇಶ

ಸಂಸತ್ ಇರೋದು ಕೆಲವರ ಇಷ್ಟಾನಿಷ್ಟಗಳ ಅಭಿವ್ಯಕ್ತಿಗಲ್ಲ

ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಸತ್ ಕಲಾಪವನ್ನು ಗುರುವಾರವೂ ಬಲಿ ತೆಗೆದುಕೊಂಡಿದ್ದು, ಬೆಳವಣಿಗೆಗಳಿಗೆ ಪ್ರಧಾನಿ...

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಸತ್ ಕಲಾಪವನ್ನು ಗುರುವಾರವೂ ಬಲಿ ತೆಗೆದುಕೊಂಡಿದ್ದು, ಬೆಳವಣಿಗೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವರ ಇಷ್ಟಾನಿಷ್ಟಗಳ ಆಧಾರದ ಮೇಲೆ ಪ್ರಜಾಪ್ರಭುತ್ವ ಕೆಲಸ ಮಾಡಲಾಗದು. ಅಷ್ಟೇ ಅಲ್ಲ, ಪ್ರಜಾಪ್ರಭುತ್ವವನ್ನು ಕೇವಲ ಚುನಾವಣೆಗಳು ಹಾಗೂ ಸರ್ಕಾರ ನಡೆಸಲಿಕ್ಕಷ್ಟೇ ಸೀಮಿತಗೊಳಿಸಲಾಗದು. ದೇಶದ ಪ್ರಗತಿಗೆ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. 
ಆದರೆ, ಕೆಲವರ ಇಷ್ಟಾನಿಷ್ಟಗಳು ಕಲಾಪದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು `ದೈನಿಕ್ ಜಾಗರಣ್' ಹಿಂದಿ ದೈನಿಕ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು. ಪ್ರಗತಿ ಪಥದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಇದೊಂದು ಜನಾಂದೋಲನವಾಗಬೇಕು. 
ಪ್ರಗತಿಯಲ್ಲಿ ನನ್ನದೂ ಪಾಲಿರಲಿ ಎಂದು ಪ್ರತಿಯೊಬ್ಬ ಪ್ರಜೆ ಅಂದುಕೊಳ್ಳಬೇಕು. ಇದನ್ನು ಸಾಧ್ಯವಾಗಿಸಬೇಕಾದ ಹಲವಾರು ಮಹತ್ವದ ಮಸೂದೆಗಳು ಸಂಸತ್‍ನಲ್ಲಿವೆ. ಎಲ್ಲರೂ ಜಿಎಸ್‍ಟಿ ಬಗ್ಗೆ ಮಾತಾಡುತ್ತಾರೆ. ಆದರೆ, ಬಡವರ ಕುರಿತಾದ ಹಲವು ಮಸೂದೆಗಳು ಬಾಕಿ ಇವೆ. ಬಡ ಕೆಲಸಗಾರರು ಬೋನಸ್ ಪಡೆಯಲು ಸದ್ಯದ ರು.3,500 ಮಿತಿಯನ್ನು ರು.7,000ಕ್ಕೆ ಏರಿಸುವುದೂ ಅದರಲ್ಲಿ ಸೇರಿದೆ. 
ಆದರೆ, ಈಗ ಸಂಸತ್‍ನಲ್ಲಿ ನಡೆಯುತ್ತಿರುವ ಬೆಳವಣಿಗೆ ಇಂಥ ಬಡಜನರ ಪರವಾದ ಕೆಲಸಗಳಿಗೆ ಅವಕಾಶ ಕೊಡುತ್ತಿಲ್ಲ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್-ಟಿಎಂಸಿ ಬಹಿಷ್ಕಾರ: ಇತ್ತ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರೊಬ್ಬರು ರಾಹುಲ್ ಗಾಂಧಿ ಕುರಿತು ಆಡಿದ ಆಕ್ಷೇಪಾರ್ಹ ಮಾತಿಗೆ ಕೆರಳಿದ ಕಾಂಗ್ರೆಸ್ ಹಾಗೂ ಟಿಎಂಸಿ ಸದಸ್ಯರು ಕಲಾಪವನ್ನು ದಿನದ ಮಟ್ಟಿಗೆ ಬಹಿಷ್ಕರಿಸಿದರು. 
ಉತ್ತರಪ್ರದೇಶ ಭದೋಯï ಸಂಸದ ವೀರೇಂದ್ರ ಸಿಂಗ್ ಅವರಾಡಿದ ಮಾತು ಸರಿಯಲ್ಲ ಎಂದು ಸಭಾಪತಿ ಸುಮಿತ್ರಾ ಮಹಾಜನ್ ಕೂಡ ಹೇಳಿದರು. ಸದಸ್ಯರ ಹೇಳಿಕೆ ಖಂಡನಾರ್ಹ ಎಂದು ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಬುಧವಾರ ನೀವು (ಕಾಂಗ್ರೆಸ್ ಸದಸ್ಯರು) ಉಪಸಭಾಪತಿ ತಂಬಿದುರೈ ಮೇಲೆ ಕಾಗದಗಳನ್ನು ತೂರಿದ್ದು, ಪ್ರಧಾನಿಯವರನ್ನು ಹಿಟ್ಲರ್ ಎಂದು ಜರಿದಿದ್ದು ಸರಿಯೆ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!