ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ ಮತ್ತೆ ಬಾದ್‍ಷಾ ಆಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್ ಈ ವರ್ಷದ ಭಾರತದ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ್ದು. ರು. 257.50 ಕೋಟಿ ಆದಾಯ ಹೊಂದಿ ಮೊದಲ ಸ್ಥಾನದಲ್ಲಿದ್ದಾರೆ.ಕಳೆದ ವರ್ಷವೂ ಮೊದಲ ಸ್ಥಾನವನ್ನು ಆಕ್ರಮಿಸಿದ್ದರು.
ರು.202.75 ಕೋಟಿಗಳೊಂದಿಗೆ ಸಲ್ಮಾನ್ ಖಾನ್ ಎರಡನೇ ಸ್ಥಾನದಲ್ಲಿದ್ದರೆ. ಉಳಿದಂತೆ ಅಮಿತಾಭ್ ಬಚ್ಚನ್, ಆಮಿರ್ ಖಾನ್, ಅಕ್ಷಯ್ ಕುಮಾರ್, ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಕ್ರಿಕೆಟ್ ತಾರೆಗಳಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮೊದಲ ಹತ್ತು ಸ್ಥಾನಗಳ ಲ್ಲಿದ್ದಾರೆ. 100 ಸೆಲಬ್ರೆಟಿಗಳ ಪಟ್ಟಿಗೆ 14 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಪೈಕಿ ಸ್ಪಿನ್ನರ್ ರವಿ ಚಂದ್ರನ್ ಅಶ್ವಿನ್, ಬಾಹುಬಲಿ ಚಿತ್ರ ಯಶಸ್ವಿಯಾಗಿದ್ದರಿಂದ ಎಸ್, ರಾಜಮೌಳಿ ಮತ್ತಿ ನಟ ಪ್ರಭಾಸ್ ಸ್ಥಾನ ಪಡೆದಿದ್ದಾರೆ, ಈ ವರ್ಷ 100 ಸೆಲಬ್ರೆಟಿಗಳ ಔಟ್ಟು ಆಸ್ತಿಮೌಲ್ಯ ರು.2,819 ಕೋಟಿ. ಈ ಪಟ್ಟಿಯಲ್ಲಿ ಸಿನಿಮಾ ಮತ್ತು ಕ್ರಿಕೆಟ್ ತಾರೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.