ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ) 
ದೇಶ

ಜಿಎಸ್‍ಟಿ ಅಂಗೀಕಾರಕ್ಕಾಗಿ ಮತ್ತೊಂದು ಸುತ್ತಿನ ಯತ್ನ

ಹೇಗಾದರೂ ಮಾಡಿ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಜಿಎಸ್‍ಟಿ ವಿಧೇಯಕಕ್ಕೆ ಅಂಗೀಕಾರ ಪಡೆಯಬೇಕು ಎಂದು ಹಠಕ್ಕೆ ಬಿದ್ದಿರುವ ಕೇಂದ್ರ ಸರ್ಕಾರ, ಅದಕ್ಕಾಗಿ ಮತ್ತೊಂದು ಕಸರತ್ತು ಆರಂಭಿಸಿದೆ...

ನವದೆಹಲಿ: ಹೇಗಾದರೂ ಮಾಡಿ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಜಿಎಸ್‍ಟಿ ವಿಧೇಯಕಕ್ಕೆ ಅಂಗೀಕಾರ ಪಡೆಯಬೇಕು ಎಂದು ಹಠಕ್ಕೆ ಬಿದ್ದಿರುವ ಕೇಂದ್ರ ಸರ್ಕಾರ, ಅದಕ್ಕಾಗಿ  ಮತ್ತೊಂದು ಕಸರತ್ತು ಆರಂಭಿಸಿದೆ.

ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ)ಗೆ ಸಂಬಂಧಿಸಿ ಕೆಲವು ಪ್ರಸ್ತಾಪಗಳನ್ನು ಸರ್ಕಾರ ಕಾಂಗ್ರೆಸ್‍ಗೆ ಸಲ್ಲಿಸಿದೆ. ಭಾನುವಾರ ಕಾಂಗ್ರೆಸ್ ನಾಯಕರು ಸಭೆ ಸೇರಿ, ಈ ಪ್ರಸ್ತಾಪಗಳ ಕುರಿತು  ಚರ್ಚಿಸಿ, ನಿರ್ಧಾರ ಕೈಗೊಳ್ಳಲಿದ್ದಾರೆ. ಸೋಮವಾರ ಕಾಂಗ್ರೆಸ್ ತನ್ನ ನಿಲುವನ್ನು ಸರ್ಕಾರಕ್ಕೆ ತಿಳಿಸಲಿದೆ. ಒಟ್ಟಿನಲ್ಲಿ ಅಧಿವೇಶನ ಕೊನೆಗೊಳ್ಳುವ ಮೊದಲು ಕಾಂಗ್ರೆಸ್ ನ ನೆರವಿನಿಂದ ಜಿಎಸ್‍ಟಿ ವಿಧೇಯಕ ಅಂಗೀಕರಿಸುವ ಸರ್ಕಾರದ ಪ್ರಯತ್ನ ಕೈಗೂಡುವುದು ಬಹುತೇಕ ಖಚಿತ ಎನ್ನಲಾಗಿದೆ. ಜಿಎಸ್‍ಟಿ ಜೊತೆಗೆ, ರಿಯಲ್ ಎಸ್ಟೇಟ್ ವಿಧೇಯಕಕ್ಕೂ ಅಂಗೀಕಾರ ಪಡೆಯುವ ಯತ್ನವನ್ನು ಬಿಜೆಪಿ ನಡೆಸುತ್ತಿದೆ.

ಅದರಂತೆ, ಮುಂದಿನ ವಾರದ ಪ್ರಮುಖ ಅಜೆಂಡಾಗಳ ಪಟ್ಟಿಯಲ್ಲಿ ಜಿಎಸ್‍ಟಿ ಮತ್ತು ರಿಯಲ್ ಎಸ್ಟೇಟ್‍ಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಪ್ರತಿಭಟನೆ ಹೆರಾಲ್ಡ್ ಕೇಸ್‍ಗಲ್ಲ ಎಂದ ಕಾಂಗ್ರೆಸ್
``ವ್ಯಾಪಂ ಮತ್ತು ಲಲಿತ್ ಮೋದಿ ಹಗರಣಗಳಿಗೆ ಸಂಬಂಧಿಸಿ ಹಾಗೂ ಸಚಿವ ಜ.ವಿ.ಕೆ.ಸಿಂಗ್ ವಿರುದ್ಧಕ್ರಮ ಕೈಗೊಳ್ಳಲು ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧನಾವು ಪ್ರತಿಭಟನೆ  ನಡೆಸುತ್ತಿದ್ದೇವೆಯೇ ಹೊರತು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕಾಗಿ ಅಲ್ಲ'' ಎಂದು ಕಾಂಗ್ರೆಸ್ ಶನಿವಾರ ಹೇಳಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಹಿಡಿದುಕೊಂಡು ಕಾಂಗ್ರೆಸ್ ಸಂಸತ್‍ನಲ್ಲಿ  ಗದ್ದಲ ಉಂಟುಮಾಡುತ್ತಿದೆ.

ಜಿಎಸ್‍ಟಿಯಂತಹ ಪ್ರಮುಖ ವಿಧೇಯಕಗಳ ಅಂಗೀಕಾರಕ್ಕೆ ಅಡ್ಡಿಯಾಗುವ ಹುನ್ನಾರವೂ ಇದರ ಹಿಂದೆ ಅಡಗಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ  ಕಾಂಗ್ರೆಸ್ ಈ ಸ್ಪಷ್ಟನೆ ನೀಡಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿನ ಪ್ರತಿಭಟನೆಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಚಿದಂಬರಂ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಆಜಾದ್ ಮತ್ತು ಸಿಬಲ್ ಅವರೂ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ