ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷೀದ್ (ಸಂಗ್ರಹ ಚಿತ್ರ) 
ದೇಶ

ಪ್ರಣಬ್ ಪ್ರಧಾನಿ ಆಗಿದ್ರೆ ಕಾಂಗ್ರೆಸ್ ಸೋಲುತ್ತಿರಲಿಲ್ಲ

2004ರ ಲೋಕಸಭಾ ಐಐಚುನಾವಣೆಯ ಬಳಿಕ ಯುಪಿಎ ಸರ್ಕಾರದ ಪ್ರಧಾನಿಯಾಗಿ ಪ್ರಣಬ್ ಮುಖರ್ಜಿಯ ಬದಲಾಗಿ, ಮನಮೋಹನ್ ಸಿಂಗ್ ಅವರ ಆಯ್ಕೆ ಕಾಂಗ್ರೆಸ್ಸಿಗರಿಗೆ ಅಷ್ಟೇ ಅಲ್ಲ, ದೇಶದ ಜನತೆಗೂ ಅಚ್ಚರಿ...

ನವದೆಹಲಿ: 2004ರ ಲೋಕಸಭಾ ಐಐಚುನಾವಣೆಯ ಬಳಿಕ ಯುಪಿಎ ಸರ್ಕಾರದ ಪ್ರಧಾನಿಯಾಗಿ ಪ್ರಣಬ್ ಮುಖರ್ಜಿಯ ಬದಲಾಗಿ, ಮನಮೋಹನ್ ಸಿಂಗ್ ಅವರ ಆಯ್ಕೆ ಕಾಂಗ್ರೆಸ್ಸಿಗರಿಗೆ ಅಷ್ಟೇ  ಅಲ್ಲ, ದೇಶದ ಜನತೆಗೂ ಅಚ್ಚರಿ ತಂದಿತ್ತು.

ಆದರೆ, ಒಂದು ವೇಳೆ ಪ್ರಣಬ್ ಅವರನ್ನೇ ಪ್ರಧಾನಿಯನ್ನಾಗಿ ಮಾಡಿದ್ದರೆ, ಬಹುಶಃ ಕಾಂಗ್ರೆಸ್ 2014ರ ಚುನಾವಣಾ ಆಘಾತದಿಂದ ಪಾರಾಗಬಹುದಿತ್ತು ಐಂದು ಯುಪಿಎ ಮಾಜಿ ಸಚಿವ ಸಲ್ಮಾನ್  ಖುರ್ಷೀದ್ ಅಭಿಪ್ರಾಯಪಟ್ಟಿದ್ದಾರೆ. ಯುಪಿಎ ಸರ್ಕಾರದ ಭಾಗವಾಗಿದ್ದ ತಮ್ಮದಷ್ಟೇ ಅಲ್ಲದೆ, ಹಲವು ನಾಯಕರ ಕಿರು ಆತ್ಮಕಥೆ ಎಂದೇ ಬಣ್ಣಿಸಿರುವ ತಮ್ಮ ಹೊಸ ಪುಸ್ತಕ `ದ ಅದರ್ ಸೈಡ್ ಆಫ್  ದಿ ಮೌಂಟೆನ್ 'ನಲ್ಲಿ ಖುರ್ಷೀದ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲ ಕೈಮೀರಿ ಹೋದಮೇಲೆ ಬುದ್ದಿ ಬರುವುದು ಸಹಜ ಬಿಡಿ ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ಅದೇ ವೇಳೆ, ಮಾಜಿ ಪ್ರಧಾನಿ ನರಸಿಂಹರಾವ್ ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿ ದೇಶದ ಭವಿಷ್ಯವನ್ನೇ ಬದಲಾಯಿಸಿದ ವ್ಯಕ್ತಿ ಮನಮೋಹನ್ ಸಿಂಗ್ ಎಂಬುದನ್ನು ಯಾರೂ  ಮರೆಯಲಾಗದು ಎಂದಿದ್ದಾರೆ, ಯುಪಿಎ2ರ ಸೋಲಿಗೆ 2ಜಿ, ಕಾಮನ್ವೆಲ್ತ್, ಕಲ್ಲಿದ್ದಲು ಹಗರಣಗಳು ಕಾರಣ ಎಂದಿರುವ ಅವರು, ಆದರೆ, ಆ ಹಗರಣದಲ್ಲಿ ಹೆಸರು ಕೇಳಿಬಂದಿರುವ ರಾಜಕಾರಣಿಗಳ  ಅಥವಾ ಅಧಿಕಾರಿಗಳ ಆಸ್ತಿಪಾಸ್ತಿಯಲ್ಲಿ ಬಹು ಕೋಟಿ ಹಗರಣಗಳ ನೆರಳು ಕಾಣಿಸುತ್ತಿಲ್ಲ. ಅಂದರೆ, ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನಿರ್ಧಾರಗಳಲ್ಲಿ ತಪ್ಪಾಗಿದೆಯೇ ವಿನಃ, ಹಣದ  ವಹಿವಾಟು ಅಥವಾ ಭ್ರಷ್ಟಾಚಾರ ನಡೆದಿಲ್ಲ ಎಂದೂ ಕೂಡ ವಿಶ್ಲೇಷಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT