ಸಂಬಾಲ್ : ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ಶಂಕಿತ ಅಲ್ ಖೈದಾ ಉಗ್ರಗಾಮಿಯನ್ನು ಬಂಧಿಸಲಾಗಿದೆ.
ನಂತರ ಅವನನ್ನು ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕಳೆದ ಎರಡು ದಿನಗಳಲ್ಲಿ ಬಂಧಿತಗೊಂಡ ಮೂರನೇ ವ್ಯಕ್ತಿ ಈತನಾಗಿದ್ದಾನೆ.
ಕ್ರಿಸ್ ಮಸ್ ಮತ್ತು ಹೊಸ ವರ್ಷ ಸಂದರ್ಭಗಳಲ್ಲಿ ದೆಹಲಿ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಭಯೋತ್ಪಾದನೆ ಸಂಘಟನೆಯ ಇಬ್ಬರು ಶಂಕಿತ ಕಾರ್ಯಕರ್ತರನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿತ್ತು, ಶಂಕಿತ ಉಗ್ರರು ಸಂಬಾಲ್ ಜಿಲ್ಲೆಗೆ ಸೇರಿದವರು ಎಂದು ನಂಬಲಾಗಿದೆ.