ಸಂಗ್ರಹ ಚಿತ್ರ (ಕೃಪೆ ಪಿಟಿಐ) 
ದೇಶ

ಟ್ವೀಟ್ ವಿವಾದ: ಕೇಜ್ರಿವಾಲ್ ಮಗಳನ್ನು ರೇಪ್ ಮಾಡಿದವರಿಗೆ ಬಹುಮಾನ!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳನ್ನು ಅತ್ಯಾಚಾರಗೈದರೆ ಬಹುಮಾನ ನೀಡುತ್ತೇನೆ ಎಂದು ಗ್ಯಾರಿ ಸಿಂಗ್...

ದೆಹಲಿ:  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳನ್ನು ಅತ್ಯಾಚಾರಗೈದರೆ ಬಹುಮಾನ ನೀಡುತ್ತೇನೆ ಎಂದು ಗ್ಯಾರಿ ಸಿಂಗ್ ಎನ್ನುವ ವ್ಯಕ್ತಿ ಟ್ವೀಟ್ ಮಾಡಿದ್ದಾನೆ. ಕೇಜ್ರಿವಾಲ್ ಮಗಳನ್ನು ಅತ್ಯಾಚಾರ ಮಾಡಿದರೆ ರು. 1 ಲಕ್ಷ ಹಾಗೂ ಬೈಕ್ ಬಹುಮಾನವಾಗಿ ಕೊಡುತ್ತೇನೆ ಎಂದು ಹೇಳಿರುವ ಗ್ಯಾರಿ, ಅತ್ಯಾಚಾರ ಮಾಡುವವನು 17 ಮತ್ತು 18ರ ಮಧ್ಯೆ ವಯಸ್ಸುಳ್ಳವನಾಗಿರಬೇಕೆಂದು ಟ್ವೀಟಿಸಿದ್ದಾನೆ. 
ಈ ಟ್ವೀಟ್ ವಿವಾದವಾಗುತ್ತಿದ್ದಂತೆ ಟ್ವೀಟಿಸಿದಾತ ಅದನ್ನು ತೆಗೆದು ಹಾಕಿದ್ದಾನೆ. ಈತನ ಟ್ವೀಟ್‌ನ್ನು ನೋಡಿದ ನೆಟಿಜನ್‌ಗಳು ದೆಹಲಿ ಮಹಿಳಾ ಕಮಿಷನ್ ಸದಸ್ಯೆ ಪ್ರೊಮಿಲಾ ಗುಪ್ತಾ ಅವರ ಗಮನಕ್ಕೆ ತಂದಿದ್ದು, ತದನಂತರ ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಈ ಟ್ವೀಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರೊಮಿಲಾ ಟ್ವೀಟ್ ಮಾಡಿದ ಕೂಡಲೇ ವಿವಾದಿತ ಟ್ವೀಟ್ ಡಿಲೀಟ್ ಆಗಿದೆ.
ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಬಾಲಾಪರಾಧಿಯನ್ನು ಬಂಧಮುಕ್ತಗೊಳಿಸಿರುವ ವೇಳೆಯೇ ಈ ವಿವಾದ ಟ್ವೀಟ್ ಸುದ್ದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT