ಡಿಡಿಸಿಎ ಭ್ರಷ್ಟಾಚಾರ ಹೊರಹಾಕುವೆ: ಕೀರ್ತಿ ಅಜಾದ್
ಡಿಡಿಸಿಎ ಅತಿದೊಡ್ಡ ಭ್ರಷ್ಟಾಚಾರವನ್ನು ಭಾನುವಾರ ಬಯಲಿಗೆಳೆಯುವುದಾಗಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಶನಿವಾರ ಘೋಷಿಸಿದ್ದಾರೆ...
ನವದೆಹಲಿ: ಡಿಡಿಸಿಎ ಅತಿದೊಡ್ಡ ಭ್ರಷ್ಟಾಚಾರವನ್ನು ಭಾನುವಾರ ಬಯಲಿಗೆಳೆಯುವುದಾಗಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಶನಿವಾರ ಘೋಷಿಸಿದ್ದಾರೆ.
ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧದ ಆರೋಪಗಳ ಬಗ್ಗೆ ಸುಮ್ಮನಿರುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡೆರಡು ಬಾರಿ ಮನವೊಲಿಸಿದರೂ ಆಜಾದ್ ಮಾತ್ರ ಬಗ್ಗಿಲ್ಲ. ``ಭಾನುವಾರ ಸಂಜೆ 4 ಗಂಟೆಗೆ ಆಡಿಯೋ-ವಿಶುವಲ್ ಜತೆಗೇ ಮಾಧ್ಯಮಗಳ ಮುಂದೆ ಬರುತ್ತೇನೆ. ಡಿಡಿಸಿಎ ಭ್ರಷ್ಟಾಚಾರವನ್ನು ಹೊರಹಾಕುತ್ತೇನೆ'' ಎಂದು ಕೀರ್ತಿ ಆಜಾದ್ ಶನಿವಾರ ಹೇಳಿದ್ದಾರೆ. ಜತೆಗೆ, ನನ್ನ ಹೋರಾಟ ಯಾರ ವಿರುದ್ಧವೂ ಅಲ್ಲ, ಭ್ರಷ್ಟಾಚಾರದ ವಿರುದ್ಧ ಎಂದೂ ಅವರು ಘೋಷಿಸಿದ್ದಾರೆ. ಆಜಾದ್ 3 ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾದವರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.