ಪ್ರಕಾಶ್ ಜವಾಡೇಕರ್ 
ದೇಶ

ಇಎಸ್‍ಎ ಜನಜೀವನಕ್ಕೆ ಅಡ್ಡಿಯಾಗದು

ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ(ಇಎಸ್‍ಎ) ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್‍ನಲ್ಲಿ ಕೇಂದ್ರ ಸರ್ಕಾರ ಪರಿಷ್ಕೃತ ಕರಡು ಅಧಿಸೂಚನೆ ಹೊರಡಿಸಿದ್ದು...

ನವದೆಹಲಿ: ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ(ಇಎಸ್‍ಎ) ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್‍ನಲ್ಲಿ ಕೇಂದ್ರ ಸರ್ಕಾರ ಪರಿಷ್ಕೃತ ಕರಡು ಅಧಿಸೂಚನೆ ಹೊರಡಿಸಿದ್ದು, ಸಂಬಂಧಿತ ರಾಜ್ಯಗಳ ಆತಂಕ ದೂರ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸೋಮವಾರ ಹೇಳಿದೆ. ಪಶ್ಚಿಮಘಟ್ಟ ಸಂರಕ್ಷಣೆಯ ನಿಟ್ಟಿನಲ್ಲಿ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ವಾದಕ್ಕೆ ಸ್ಪಂದಿಸಿ, ಹಿಂದಿನ ಅಧಿಸೂಚನೆಯನ್ನು ಪರಿಷ್ಕರಣೆ ಮಾಡಲಾಗಿದೆ. ಇದೀಗ ಒಟ್ಟು 56,825 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ. ಈ ಮೂಲಕ ಪಶ್ಚಿಮಘಟ್ಟದ ಅಮೂಲ್ಯ ಜೀವವೈವಿಧ್ಯ ಸಂರಕ್ಷಣೆಯ ಗುರಿ ಹೊಂದಲಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಘೋಷಣೆಯಿಂದಾಗಿ ಘೋಷಿತ ಪ್ರದೇಶದ ಸಾಮಾನ್ಯ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರದು. ಜನವಸತಿ, ಕೃಷಿ ಚಟುವಟಿಕೆಗಳಿಗೆ ಇದರಿಂದಾಗಿ ಯಾವುದೇ ತೊಂದರೆಯಾಗದು ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!

ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್: ಮಹಿಳೆಗೆ ಕಿರುಕುಳ, Video ವೈರಲ್

5ನೇ T20I: ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿದ ಟೀಂ ಇಂಡಿಯಾ, 45 ನಿಮಿಷಗಳ ಕಾಲ ಪಂದ್ಯ ಮುಂದೂಡಿಕೆ!

ಅಮೆರಿಕದಲ್ಲಿ ಕೌಟುಂಬಿಕ ಹಿಂಸಾಚಾರ: ಭಾರತೀಯ ಮೂಲದ ಗೂಗಲ್ ಟೆಕ್ಕಿ ಹತ್ಯೆ; ಮಗನಿಗೂ ಗುಂಡೇಟು!