ನಾನು ಅವನಲ್ಲ...ಅವಳು ಎಂದ ಒಡಿಶಾದ ಸರ್ಕಾರಿ ಅಧಿಕಾರಿ
ಉನ್ನತ ಹುದ್ದೆಯಲ್ಲಿರುವ ಒಡಿಶಾದ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮನ್ನು ತೃತೀಯಲಿಂಗಿ(ಮಂಗಳಮುಖಿ) ಎಂದು ಘೋಷಿಸಿಕೊಂಡಿದ್ದಾರೆ. ರತಿಕಾಂತ ಪ್ರಧಾನ್(32)...
ಭುವನೇಶ್ವರ: ಉನ್ನತ ಹುದ್ದೆಯಲ್ಲಿರುವ ಒಡಿಶಾದ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮನ್ನು ತೃತೀಯಲಿಂಗಿ(ಮಂಗಳಮುಖಿ) ಎಂದು ಘೋಷಿಸಿಕೊಂಡಿದ್ದಾರೆ. ರತಿಕಾಂತ ಪ್ರಧಾನ್(32) ಎಂಬ ಒಡಿಶಾ ಆರ್ಥಿಕ ಸೇವಾ ಇಲಾಖೆಯ ಅಧಿಕಾರಿ ತಾವು ತೃತೀಯಲಿಂಗಿಯೊಂದೂ, ತಮ್ಮ ಅಧಿಕೃತ ಹೆಸರು ಇನ್ನುಮುಂದೆ ಐಶ್ವರ್ಯ ಋತುಪರ್ಣ ಪ್ರಧಾನ್ ಎಂದೂ ಹೇಳಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಸುಪ್ರೀಂಕೋರ್ಟ್ ಮಂಗಳಮುಖಿಯರನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಬೇಕೆಂದು ತೀರ್ಪು ನೀಡಿದ ನಂತರ ಈ ಅಧಿಕಾರಿಯ ಹೆಜ್ಜೆ ಕ್ರಾಂತಿಯಾಗಿದೆ. ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿ ಹೊಸ ಹೆಸರು ಮತ್ತು ಬದಲಾದ ಲಿಂಗದ ಮಾಹಿತಿ ನೀಡಿದ್ದು, ಸರ್ಕಾರಕ್ಕೂ ಈ ಪತ್ರ ನೀಡಲಿರುವುದಾಗಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.