ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೋದಿ ರಾಜಿನಾಮೆಗೆ ಕೇಜ್ರಿವಾಲ್ ಸವಾಲು

ತಮ್ಮ ಕಚೇರಿ ಮೇಲೆ ನಡೆದ ಸಿಬಿಐ ದಾಳಿ, ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿಯನ್ನು ಪಾರು ಮಾಡಲು ನಡೆಸಿದ...

ನರೇಂದ್ರ ಮೋದಿ-ಅರವಿಂದ್ ಕೇಜ್ರಿವಾಲ್
Mainashree
Updated On : 23 Dec 2015, 12:57 pm
ನವದೆಹಲಿ: ತಮ್ಮ ಕಚೇರಿ ಮೇಲೆ ನಡೆದ ಸಿಬಿಐ ದಾಳಿ, ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿಯನ್ನು ಪಾರು ಮಾಡಲು ನಡೆಸಿದ ಯತ್ನ ಎಂದು ಪುನರುಚ್ಚರಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಷಡ್ಯಂತ್ರದ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ರಾಜಿನಾಮೆ ನೀಡಬಾರದೇಕೆ ಎಂದು ಸವಾಲೆಸಿದಿದ್ದಾರೆ. 
ದೆಹಲಿ ವಿಧಾನಸಭೆಯಲ್ಲಿ ಡಿಡಿಸಿಎ ಹಗರಣದ ಬಗ್ಗೆ ಚರ್ಚಿಸಲೆಂದೇ ಸೋಮವಾರ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧದ ತಮ್ಮ ಆಕ್ರೋಶವನ್ನು ಹೊರ ಹಾಕಿದ ದೆಹಲಿ ಸಿಎಂ, ನನ್ನ ಹೆಸರೆತ್ತಿದರೆ ಮೋದಿಯವರ ರಕ್ತ ಕುದಿಯುತ್ತದೆ ಎಂದು ಕೆಲವು ಬಿಜೆಪಿ ನಾಯಕರೇ ಖಾಸಗಿಯಾಗಿ ನನಗೆ ಹೇಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಮಂಡಳಿ(ಡಿಡಿಸಿಎ) ಅಧ್ಯಕ್ಷರಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವಧಿಯಲ್ಲಿ ನಡೆದಿರುವ ಹಗರಣದ ತನಿಖೆಗೆ ದೆಹಲಿ ಎಎಪಿ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್ ನಲ್ಲಿ ಜೇಟ್ಲಿಯವರನ್ನು ಸಮರ್ಥಿಸಿಕೊಂಡ ಕೆಲವೇ ಗಂಟೆಗಳಲ್ಲಿ ಕೇಜ್ರಿವಾಲ್ ಈ ಪ್ರಹಾರ ನಡೆಸಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement