ದೇಶ

ಎನ್‍ಸಿಪಿ ನಾಯಕ ಭುಜಬಲ್ ಗೆ ಸೇರಿದ ರು.110 ಕೋಟಿ ಆಸ್ತಿ ಮುಟ್ಟುಗೋಲು

Mainashree
ಮುಂಬೈ: ಎನ್‍ಸಿಪಿ ನಾಯಕ ಛಗನ್ ಭುಜ್‍ಬಲ್‍ಗೆ ಸೇರಿದ ರು.110 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ. 
ಮಹಾರಾಷ್ಟ್ರದ ಲೋಕೋಪಯೋಗಿ ಖಾತೆ ಮಾಡಿ ಸಚಿವರಾಗಿರುವ ಅವರ ವಿರುದ್ಧ ಹವಾಲಾ ಜಾಲದ ಮೂಲಕ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಂಬೈನ ಬಾಂದ್ರಾದಲ್ಲಿ 2 ಜಮೀನುಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಮಾರುಕಟ್ಟೆಯಲ್ಲಿ ಅದರ ಮೌಲ್ಯ ರು.110 ಕೋಟಿ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಆದರೆ ಭುಜ್ ಬಲ್ ನೇತೃತ್ವದ ಸಂಸ್ಥೆ ಅದರ ಬೆಲೆಯನ್ನು ರು.26 ಕೋಟಿ ಎಂದು ಉಲ್ಲೇಖಿಸಿತ್ತು ಎಂದು ಹೇಳಲಾಗಿದೆ.
SCROLL FOR NEXT