ಬರಗಾಲವಿದ್ದರೂ ರು. 7 ಕೋಟಿ ಖರ್ಚು ಮಾಡಿ ತೆಲಂಗಾಣ ಸಿಎಂನಿಂದ ಯಾಗ
ತೆಲಂಗಾಣದಲ್ಲಿ ಕೃಷಿ ನಾಶ ಸಂಭವಿಸಿ ಜನರು ಹಸಿವಿನಿಂದ ಕಂಗೆಟ್ಟಿದ್ದರೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರು. 7 ಕೋಟಿ ...
ಹೈದ್ರಾಬಾದ್: ತೆಲಂಗಾಣದಲ್ಲಿ ಕೃಷಿ ನಾಶ ಸಂಭವಿಸಿ ಜನರು ಹಸಿವಿನಿಂದ ಕಂಗೆಟ್ಟಿದ್ದರೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರು. 7 ಕೋಟಿ ವ್ಯಯಿಸಿ ಯಾಗ ಮಾಡುತ್ತಿದ್ದಾರೆ.
ಮೇಡಕ್ ಜಿಲ್ಲೆಯ ಎರವೆಳ್ಳಿಯಲ್ಲಿರುವ ಮುಖ್ಯಮಂತ್ರಿಯವರ ಫಾರ್ಮ್ಹೌಸ್ ನಲ್ಲಿ ಈ ಯಾಗ ನಡೆಯುತ್ತಿದೆ. ಈ ಯಾಗಕ್ಕೆ ರು. 7 ಕೋಟಿಯನ್ನು ವ್ಯಯಿಸುತ್ತಿದ್ದು, ಇದು ಸರ್ಕಾರದ ದುಡ್ಡಲ್ಲ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಈ ಯಾಗದಲ್ಲಿ 1500 ಪೂಜಾರಿಗಳು ಭಾಗವಹಿಸುತ್ತಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡಾ ಯಾಗದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟು 50,00 ಮಂದಿ ಈ ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಲ್ಲೆಡೆ ಟೀಕೆ: ರಾಜ್ಯದಲಿ ಕೃಷಿ ನಾಶ ಸಂಭವಿಸಿ ಕಂಗೆಟ್ಟಿರುವಾಗ ಮುಖ್ಯಮಂತ್ರಿಯವರು ಯಾಗ ನಡೆಸುವುದನ್ನು ಕೃಷಿಕರು ಟೀಕಿಸಿದ್ದಾರೆ.
ಈ ಹಿಂದೆ ಚಂದ್ರಶೇಖರ ರಾವ್ ರು. 5 ಕೋಟಿ ಬಸ್ ಖರೀದಿಸಿದ್ದು ವಿವಾದವಾಗಿತ್ತು. ಬೆಡ್ ರೂಂ, ರೆಸ್ಟ್ ರೂಂ, ಮೀಟಿಂಗ್ ಹಾಲ್, ಇಂಟರ್ನೆಟ್ ಸೌಲಭ್ಯ ಮೊದಲಾದ ಸೌಕರ್ಯವಿರುವ ಬುಲೆಟ್ ಪ್ರೂಫ್ ಬಸ್ ನ್ನು ಸರ್ಕಾರ ಮುಖ್ಯಮಂತ್ರಿಯವರಿಗಾಗಿ ಖರೀದಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.