ನವದೆಹಲಿ/ತಿರುವನಂತಪುರ: ಕೇರಳ ರಾಜ್ಯಪಾಲ ಪಿ.ಸದಾಶಿವಂ ಲೇಟಾಗಿ ಬಂದು ವಿಮಾನ ಮಿಸ್ ಮಾಡಿಕೊಂಡ ಘಟನೆ ಮಂಗಳವಾರ ಕೊಚ್ಚಿಯಲ್ಲಿ ನಡೆದಿದೆ.
ರಾಜ್ಯ ಪಾಲರನ್ನು ಬಿಟ್ಟು ಹೋಗಿದ್ದಕ್ಕೆ ರಾಜಭವನವು ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆ, ವಿಮಾನವು ನಿಯಮದ ಅನುಸಾರ ಸರಿಯಾದ ಸಮಯಕ್ಕೆ ಟೇಕ್ ಆಫ್ ಆಗಿದೆ ಎಂದು ಏರ್‍ಇಂಡಿಯಾ ಸ್ಪಷ್ಟನೆ ನೀಡಿದೆ.
ಇದೇ ವೇಳೆ, ಘಟನೆ ಬಗ್ಗೆ ವಿಚಾರಣೆ ನಡೆಸುತ್ತೇನೆ ಎಂದು ಕೇರಳ ಸಿಎಂ ಉಮ್ಮನ್ ಚಾಂಡಿ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಕೊಚ್ಚಿಯಲ್ಲೇ ತಂಗಿದ ರಾಜ್ಯಪಾಲರು ಬುಧವಾರ ಬೆಳಗ್ಗೆ ತಿರುವನಂತಪುರ ತಲುಪಿದ್ದಾರೆ.