ಮಾಜಿ ಕ್ರಿಕೆಟಿಗ ಹಾಗೂ ಸಂಸದ ಕೀರ್ತಿ ಆಜಾದ್ (ಸಂಗ್ರಹ ಚಿತ್ರ) 
ದೇಶ

ಯಾವ ತಪ್ಪಿಗೆ ಅಮಾನತು: ಮೋದಿಗೆ ಕೀರ್ತಿ ಆಜಾದ್ ಪ್ರಶ್ನೆ

ಪಕ್ಷದಿಂದ ಅಮಾನತು ಮಾಡುವಂತಹ ತಪ್ಪು ನಾನೇನು ಮಾಡಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಸಂಸದ ಕೀರ್ತಿ ಆಜಾದ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗುರುವಾರ ಪ್ರಶ್ನಿಸಿದ್ದಾರೆ...

ಅಹ್ಮದಾಬಾದ್: ಪಕ್ಷದಿಂದ ಅಮಾನತು ಮಾಡುವಂತಹ ತಪ್ಪು ನಾನೇನು ಮಾಡಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಸಂಸದ ಕೀರ್ತಿ ಆಜಾದ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗುರುವಾರ ಪ್ರಶ್ನಿಸಿದ್ದಾರೆ.

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧದ ಡಿಡಿಸಿಎ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳೊಂದಿಗೆ ಧ್ವನಿಗೂಡಿಸಿದ್ದ ಕೀರ್ತಿ ಆಜಾದ್ ಅವರನ್ನು ಪಕ್ಷ ವಿರೋಧ ಚಟುವಟಿಕೆ ಹಾಗೂ ಅಶಿಸ್ತು ಕಾರಣ ನೀಡಿದ್ದ ಬಿಜೆಪಿ ಪಕ್ಷ ಅವರನ್ನು ಬುಧವಾರ ಅಮಾನತು ಮಾಡಿತ್ತು.

ಹೀಗಾಗಿ ಅಮಾನತು ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು ಈ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿದ್ದು, ನನ್ನ ಹೋರಾಟವೇನಿದ್ದರು ಭ್ರಷ್ಟಚಾರ ವಿರುದ್ಧವೇ ಹೊರತು ಒಬ್ಬ ವ್ಯಕ್ತಿಯ ವಿರುದ್ಧವಲ್ಲ. ನನ್ನ ಮನವಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಳುತ್ತಾರೆ ಹಾಗೂ ನ್ಯಾಯವನ್ನು ಒದಗಿಸುತ್ತಾರೆಂದು ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಅಮಾನತು ಕುರಿತಂತೆ ಪಕ್ಷದ ವತಿಯಿಂದ ನನಗೆ ನೋಟಿಸ್ ಬಂದಿತ್ತು. ಆದರೆ ನೋಟಿಸ್ ನಲ್ಲಿ ಯಾವ ಕಾರಣಕ್ಕೆ ನನ್ನನ್ನು ಅಮಾನತು ಮಾಡಲಾಗಿದೆ ಎಂಬುದರ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ. ಅಮಾನತು ಮಾಡಲು ನನ್ನ ತಪ್ಪಾದರೂ ಏನಿದೆ. ಈ ಬಗ್ಗೆ ನನಗೆ ಸ್ಪಷ್ಟನೆ ಬೇಕಿದ್ದು, ನನ್ನ ಜವಾಬ್ದಾರಿತನವನ್ನು ಅರಿಯುವ ಅಗತ್ಯವಿದೆ. ಡಿಡಿಸಿಎ ವಿಷಯ ಕುರಿತಂತೆ ಶೀಘ್ರದಲ್ಲೇ ಪಿಐಎಲ್ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!