ಔರಂಗಬಾದ್: ಮಹಾರಾಷ್ಟ್ರದ ಪರ್ಭನಿ ಜಿಲ್ಲೆಯ ಖೆದುಲಾಪತಿ ಗ್ರಾಮದಲ್ಲಿ ಮಂಗಳವಾರ ಆರು ತಿಂಗಳ ಗರ್ಭಿಣಿ ಮಹಿಳೆ ಮೇಲೆ ದರೋಡೆಕೊರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ಥೆ ನೀಡಿದ ದೂರಿನ ಆಧಾರದ ಮೇಲೆ ನಾಲ್ವರ ಆರೋಪಿಗಳ ಪೈಕಿ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ದರೋಡೆಕೊರರು ಖೆದುಲಾಪತಿ ಗ್ರಾಮದ ಹಲವು ಮನೆಗಳಲ್ಲಿ ಚಿನ್ನಾಭರಣ ದೋಚಿದ ಬಳಿಕ ಮಹಿಳೆಯೊಬ್ಬರನ್ನು ಬಲವಂತವಾಗಿ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ಥ ಮಹಿಳೆಯನ್ನು ಪರ್ಭನಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.