ದೇಶ

ದೆಹಲಿ ಟ್ರಾಫಿಕ್: ಮಹಿಳೆಯರಿಗೆ ಏಕೆ ವಿನಾಯಿತಿ?

Vishwanath S

ನವದೆಹಲಿ: ದೆಹಲಿ ಎಎಪಿ ಸರ್ಕಾರ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮವನ್ನು ಜ.1ರ ಶುಕ್ರವಾರದಿಂದ ಜಾರಿಗೆ ತರಲಿದೆ.

ಈ ನಡುವೆ ಹದಿನೈದು ದಿನಗಳ ಕಾಲ ಚಾಲ್ತಿಯಲ್ಲಿರುವ ಈ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಮತ್ತು ಮಹಿಳೆಯರಿಗೆ ಏಕೆ ವಿನಾಯಿತಿ ನೀಡಲಾಗಿದೆ ಎಂದು ಹೈಕೋರ್ಟ್ ದೆಹಲಿಯ ಕೇಜ್ರಿವಾಲ್ ಸರ್ಕಾರವನ್ನು ಪ್ರಶ್ನಿಸಿದೆ. ಜತೆಗೆ ಈ ಕುರಿತು ಸ್ಪಷ್ಟೀಕರಣ ನೀಡುವಂತೆ ದೆಹಲಿ ಸರ್ಕಾರಕ್ಕೆ ತಿಳಿಸಿರುವ ನ್ಯಾ. ಹಿಮಾ ಕೊಹ್ಲಿ ಮತ್ತು ಸುನಿಲ್ ಗೌರ್ ಅವರನ್ನೊಳಗೊಂಡ ನ್ಯಾಯಪೀಠ, ಜನವರಿ 6ಕ್ಕೆ ವಿಚಾರಣೆ ಮುಂದೂಡಿದೆ.

ನಿಯಮದಿಂದ ವಕೀಲರಿಗೂ ವಿನಾಯಿತಿ ನೀಡಬೇಕು ಎಂದು ದೆಹಲಿಯ ವಕೀಲ ರಾಹುಲ್ ಅಗರ್‍ವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ದೆಹಲಿ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ. ಅಲ್ಲದೆ, ನಿಯಮದಿಂದ ತಮಗೆ ವಿನಾಯಿತಿ ನೀಡಬೇಕು ಎಂಬ ವಕೀಲರ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ.  ಈ ನಡುವೆ ಬುಧವಾರ ದೆಹಲಿ ಶಾಲೆಯೊಂದಕ್ಕೆ ಭೇಟಿ ನೀಡಿದ ಸಿಎಂ, ಸರಿ ಬೆಸ ನಿಯಮಕ್ಕೆ ಪೋಷಕರ ಮನವೊಲಿಸುವಂತೆ ಮಕ್ಕಳಿಗೆ ಮನವಿ ಮಾಡಿದರು.

SCROLL FOR NEXT