ಅಣ್ಣಾ ಹಜಾರೆ 
ದೇಶ

ಚುನಾವಣೆ ವೇಳೆ ನೀಡಿ ಮರೆತ ಭರವಸೆಗಳನ್ನು ಮೋದಿಗೆ ನೆನಪಿಸಿದ ಅಣ್ಣಾ ಹಜಾರೆ

ಲೋಕಸಭೆ ಚುನಾವಣೆ ವೇಳೆ ನೀಡಿ ಮರೆತ ಭರವಸೆಗಳನ್ನು ಪೂರೈಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿರಿಯ ಸಾಮಾಜಿಕ...

ರಾಳೇಗಣ ಸಿದ್ಧಿ(ಮಹಾರಾಷ್ಟ್ರ): ಲೋಕಸಭೆ ಚುನಾವಣೆ ವೇಳೆ ನೀಡಿ ಮರೆತ ಭರವಸೆಗಳನ್ನು ಪೂರೈಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಪತ್ರ ಬರೆದಿದ್ದಾರೆ.

ಯುಪಿಎ ಸರ್ಕಾರ ಮತ್ತು ಎನ್​ಡಿಎ ಸರ್ಕಾರಗಳ ಮಧ್ಯೆ ಯಾವುದೇ ವ್ಯತ್ಯಾಸವೂ ಇಲ್ಲ ಎಂದು ಟೀಕಿಸಿರುವ ಅಣ್ಣಾ ಹಜಾರೆಯವರು ತಮ್ಮ ಮರೆತ ಚುನಾವಣಾ ಭರವಸೆಗಳನ್ನು ಪತ್ರ ಬರೆಯುವ ಮೂಲಕ ಮೋದಿ ಅವರಿಗೆ ನೆನಪಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ‘ಲೋಕಪಾಲ’ ಮತ್ತು ‘ಲೋಕಾಯುಕ್ತ’ ಜಾರಿ ಹಾಗೂ ರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಲು ಕೃಷಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಒದಗಿಸಿಕೊಡುವುದು ಅನಿವಾರ್ಯ ಎಂದು ಪ್ರಧಾನಿಗೆ ಬರೆದಿರುವ ಮೂರು ಪುಟಗಳ ಪತ್ರವೊಂದಲ್ಲಿ ನಮೂದಿಸಿದ್ದಾರೆ.

2014ರ ಲೋಕಸಭಾ ಚುನಾವಣೆಗೆ ಮೊದಲು ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದರೆ ರಾಷ್ಟ್ರವನ್ನು ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು ಎಂಬುದಾಗಿ ಮೋದಿ ಅವರು ಪ್ರಚಾರ ಮಾಡಿದ್ದ ಬಗ್ಗೆ 79ರ ಹರೆಯದ ವಯೋವೃದ್ಧ ಹಜಾರೆ ತಮ್ಮ ಪತ್ರದಲ್ಲಿ ಬೊಟ್ಟು ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧದ ಮೂಲಕ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಭಾರತೀಯ ನೌಕಾಪಡೆ ಅತಿಥಿ 'ಐರಿಸ್ ದೇನಾ' ಯುದ್ಧನೌಕೆಯನ್ನು ಅಮೆರಿಕ ಹೊಡೆದುರುಳಿಸಿದೆ: ಇರಾನ್

ಇರಾನ್‌ನೊಂದಿಗಿನ ಯುದ್ಧ: ಇಸ್ರೇಲ್‌ಗೆ ಭಾರಿ ಆರ್ಥಿಕ ನಷ್ಟ, ವಾರಕ್ಕೆ $ 3 ಬಿಲಿಯನ್ ವೆಚ್ಚ!

T20 ವಿಶ್ವಕಪ್ 2026: 'ಇದೊಂದು ನಮ್ಮ ನಿಯಂತ್ರಣದಲ್ಲಿಲ್ಲ..!': ಭಾರತ ಬೌಲಿಂಗ್ ಕೋಚ್ Morne Morkel ಆತಂಕ!

T20 ವಿಶ್ವಕಪ್ 2026, 2ನೇ ಸೆಮಿಫೈನಲ್: ಪಿಚ್ ನೋಡಿ ಖುಷಿ ಪಟ್ಟ ಇಂಗ್ಲೆಂಡ್, ಭಾರತಕ್ಕೆ ಆತಂಕ! ಟಾಸ್ ಗೆದ್ದೋನೆ ಬಾಸ್

SCROLL FOR NEXT